ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಮಹಿಳೆಯೊಬ್ಬರು ಮನೆಯ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತಪಟ್ಟ ಮಹಿಳೆ ನಾಗರತ್ನ ಎಂದು ತಿಳಿಯಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ ಸಾರಾಂಶ : ಫಿರ್ಯಾದಿ ಹರೀಶ್ ಚಂದನ್ (54) ಯಡ್ತರೆ ಗ್ರಾಮ ಬೈಂದೂರು ರವರು ಅವರ ಹೆಂಡತಿ ಮೃತ ನಾಗರತ್ನ(48) ಮಕ್ಕಳಾದ ವಿನಾಯಕ ,ರಿಷಿಕೇಶ ಅತ್ತೆ ಮರ್ಲಿ ರವರೊಂದಿಗೆ ವಾಸಮಾಡಿಕೊಂಡಿರುತ್ತಾರೆ ಪಿರ್ಯಾದಿದಾರರ ಹೆಂಡತಿಯೂ ಮನೆವಾರ್ತೆ ಕೆಲಸಮಾಡಿಕೊಂಡಿದ್ದು ಮಕ್ಕಳು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿರುತ್ತಾರೆ. ಪಿರ್ಯಾಧಿದಾರರ ಹೆಂಡತಿ ದಿನಾಂಕ: 12.01.2026 ರಂದು ಮಧ್ಯಾಹ್ನ ಬಿಯಾರದ ಕೆಂಪಿನಕೇರಿ ದೇವಸ್ಥಾನಕ್ಕೆ ಹೋಗಿ ಮಧ್ಯಾಹ್ನ 15:30 ಗಂಟೆಗೆ ಮನೆಗೆ ಮರಳಿ ಬಂದು ಹೊರಗಡೆ ಹೋದವರು ಸಂಜೆ 18: 00 ಗಂಟೆಯಾದರೂ ಮರಳಿ ಬಾರದೇ ಇರುವುದನ್ನು ನೋಡಿ ಪಿರ್ಯಾಧಿದಾರರು ಮತ್ತು ಮನೆಯವರು ನೆರೆಕೆರೆಯವರು ಹುಡುಕಾಡುತ್ತಿರುವಾಗ ಪಿರ್ಯಾಧಿದಾರರ ಅತ್ತೆಯ ತಂಗಿ ಗೌರಿರವರ ಮನೆಯ ಬಾವಿಯ ನೀರಿನಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಅಗ್ನಿಶಾಮಕ ಸಿಬ್ಬಂದಿರವರ ಸಹಾಯದಿಂದ ಮೇಲಕ್ಕೆ ಎತ್ತಿ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಬಂದಾಗ ಪರೀಕ್ಷಿಸಿದ ವೈಧ್ಯಾಧಿಕಾರಿರವರು 21:15 ಗಂಟೆಗೆ ಮೃತಟ್ಟಿರುವುದಾಗಿ ತಿಳಿಸಿರುತ್ತಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯು.ಡಿ.ಆರ್ 04/2026 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.



