Home Crime ಬ್ರಹ್ಮಾವರ: ಅನಾರೋಗ್ಯದಿಂದ ನೊಂದು ನೇಣಿಗೆ ಶರಣಾದ ವ್ಯಕ್ತಿ…!!

ಬ್ರಹ್ಮಾವರ: ಅನಾರೋಗ್ಯದಿಂದ ನೊಂದು ನೇಣಿಗೆ ಶರಣಾದ ವ್ಯಕ್ತಿ…!!

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರದ ಯಡ್ತಾಡಿ ಗ್ರಾಮದ ಅಲ್ತಾರು ಹಾಡಿ ಮನೆ ನಿವಾಸಿ ಸುರೇಶ್‌ ಕುಶಾಲ ಶೆಟ್ಟಿ (43) ಎಂಬವರು ಅನಾರೋಗ್ಯದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಆಗಸ್ಟ್‌ 19ರ ಸಂಜೆ 7 ಗಂಟೆಯಿಂದ ಆಗಸ್ಟ್‌ 20ರ ಬೆಳಗ್ಗೆ 7 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಹಿಂಭಾಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಮೃತರ ಸಹೋದರ ರಮೇಶ್‌ ಶೆಟ್ಟಿ (48) ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.