Home Karavali Karnataka ಮಂಗಳೂರು : ಶ್ರೀ ಗುರು ಪರಾಶಕ್ತಿ ಮಠ ಮರಕಡ : ಮಹಾ ಆರಾಧನೆ…!!

ಮಂಗಳೂರು : ಶ್ರೀ ಗುರು ಪರಾಶಕ್ತಿ ಮಠ ಮರಕಡ : ಮಹಾ ಆರಾಧನೆ…!!

ಮಡುಗಟ್ಟಿದ ಹೃದಯದೊಳಗೆ ‘ತಾಯಿ’ ಎಂಬ ಎರಡಕ್ಷರದಿ ನಿತ್ಯ ಸಂಚಲನ ಮೂಡಿಸಿ,ಭಾವ ಪರವಶತೆಯ ಉತ್ತುಂಗತೆಯತ್ತ ಕೊಂಡೊಯ್ದು,ಅನಂತತೆಯ ಹೂರಣವೇ ತಾನಾದರೂ ನಮ್ಮನೊಡನಾಡಿಗಳಾಗಿಸಿ, ಮಾಯಾತೀತನೇ ತಾನಾಗಿ ಮಾಯೆಯೊಳಗಿನ ಸೊಗಡ ಬಿತ್ತರಿಸಿ,ಸಂಘತ್ವದೊಳಗೆ ನಿತ್ಯ ನಿರಂತರ ಪ್ರೀತಿಯ ಹೊನಲನ್ನೇ ಹರಿಸಿದ ನಮ್ಮ ಸ್ವಾಮಿ, ನಮ್ಮ ಆರಾಧ್ಯ ದೈವತ ಪರಮಪೂಜ್ಯ ಶ್ರೀ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಮಹಾಸ್ವಾಮಿಯವರ ದಿವ್ಯ ಸಾನಿಧ್ಯ ನೆಲೆಗೊಂಡಿರುವ ಮಡ್ಯಾರು ಶ್ರೀ ಪರಾಶಕ್ತಿ ಕ್ಷೇತ್ರದಲ್ಲಿ ದಿನಾಂಕ 12.01.2026 ಸೋಮವಾರ ದಂದು ಮಹಾ ಆರಾಧನೋತ್ಸವವು ನಡೆಯಲಿರುವುದು.

ಈ ಮಹತ್ಕಾರ್ಯದಲ್ಲಿ ನಾವೆಲ್ಲರೂ ಪಾಲ್ಗೊಂಡು ಮಹಾಸ್ವಾಮಿಯವರ ಅನುಗ್ರಹಕ್ಕೆ ಪಾತ್ರರಾಗೋಣ ಎಂದು ಸಂಸ್ಥೆ ತಿಳಿಸಿದೆ.