ಮೂಡುಬೆಳ್ಳೆ: ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ನೆಲ್ಲಿಕಟ್ಟೆ ( ಜಿಐಇ- ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿ. ಉಡುಪಿ ಇದರ ಅಂಗ ಸಂಸ್ಥೆ) ಇಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ದತ್ತಿ ನಿಧಿ ವಿತರಣಾ ಕಾರ್ಯಕ್ರಮದೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.
ಧ್ವಜಾರೋಹಣವನ್ನು ಶ್ರೀಯುತ ನಿರಂಜನ್ ಬೆಳ್ಳೆ ಉದ್ಯಮಿ ಮೂಡುಬೆಳ್ಳೆ ಇವರು ನೆರವೇರಿಸಿ ಮಕ್ಕಳನ್ನು ಉದ್ದೇಶಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭ ಹಾರೈಸಿ, ಶಿಸ್ತಿನ ಜೀವನವನ್ನು ನಡೆಸಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಶ್ರೀಯುತ ಯಾದವ ದೇವಾಡಿಗ ಅಧ್ಯಕ್ಷರು ಜನರಲ್ ಇನ್ಸೂರೆನ್ಸ್ ಕ್ರೆಡಿಟ್ ಕಾರ್ಪೊರೆಟೀವ್ ಸೊಸೈಟಿ ಮತ್ತು ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ಇವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಮಕ್ಕಳು ಆಲೋಚನಾ ಶಕ್ತಿಯನ್ನು ಬೆಳೆಸಿಕೊಂಡು ಸುಸಂಸ್ಕೃತ ನಾಡಿನಲ್ಲಿ ಜನಿಸಿದ ನಾವು ಒಳ್ಳೆಯ ರೀತಿಯ ಮನಸ್ಥಿತಿಯನ್ನು ಬೆಳೆಸಿಕೊಂಡು ರಾಜಕೀಯವಾಗಿ ಸಾಮಾಜಿಕವಾಗಿ ಉತ್ತಮರೀತಿಯಲ್ಲಿ ದೇಶದ ಕುರಿತಾದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅತಿಥಿಯಾದ ಪ್ರಭಾರ ಕಾರ್ಯದರ್ಶಿ ಜನರಲ್ ಇನ್ಸುರೆನ್ಸ್ ಎಂಪ್ಲಾಯಿಸ್ ಕ್ರೆಡಿಟ್ ಕೊ. ಆಪರೇಟಿವ್ ಸೊಸೈಟಿ ಉಡುಪಿ. ಇವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ವಿಧ್ಯಾರ್ಥಿಗಳು ಕ್ರೀಡೆಯಲ್ಲಿ, ವಿದ್ಯೆಯಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದು ಸಾಧನೆ ಮಾಡಿ ಭವಿಷ್ಯ ಉಜ್ವಲವಾಗಲಿ ಎಂದು ಹೇಳಿದರು.
ಈ ಸುಸಂದರ್ಭದಲ್ಲಿ ದತ್ತಿನಿಧಿಯನ್ನು ಪಡೆಯುವ ವಿದ್ಯಾರ್ಥಿಗಳ ಮಾಹಿತಿಯನ್ನು ನಮ್ಮ ಕಾಲೇಜಿನ ಪ್ರಾಂಶುಪಾಲೆ ಡಾ. ಲೀನಾ ಎಸ್ ನಾಯಕ್ ಇವರು ಓದಿ ಹೇಳಿದರು.ಕಾಲೇಜಿನ ಗಣಿತ ಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ಕಾವ್ಯ ಸ್ವಾಗತಿಸಿದರು.
ಕುಮಾರಿ ಸುಶ್ಮಿತಾ ಕನ್ನಡ ಉಪನ್ಯಾಸಕಿ ಕಾರ್ಯಕ್ರಮವನ್ನು ನಿರೂಪಿಸಿದರು.
ಕುಮಾರಿ ರಂಜಿತಾ ಪ್ರಭು ಗಣಕವಿಜ್ಞಾನ ಉಪನ್ಯಾಸಕಿ ಸರ್ವರನ್ನು ವಂದಿಸಿದರು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ಸಂಖ್ಯಾಶಾಸ್ತ್ರ ಉಪನ್ಯಾಸಕಿಯಾದ ಶ್ರೀಮತಿ ವನ್ಯಶ್ರೀ ಇವರು ವಾಚಿಸಿದರು.
ಸ್ವಾತಂತ್ರ್ಯ ದಿನಾಚರಣೆಯ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾದ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ರಕ್ಷಾ ಡಿ ಆರ್ ಜಾನಪದ ಶೈಲಿಯಲ್ಲಿ ಸುಶ್ರಾವ್ಯವಾಗಿ ದೇಶಭಕ್ತಿ ಗೀತೆ ಹಾಡಿದರು.
ವಿದ್ಯಾರ್ಥಿ ನಾಯಕರಾದ ಆಸ್ಟನ್ ಹಾಗೂ ನವ್ಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.




