ಉಡುಪಿ : ಭೂಗತ ದೊರೆ ರವಿ ಪೂಜಾರಿಯ ತಾಯಿ ಸುಶೀಲಾ ಪೂಜಾರ್ತಿ ನಿನ್ನೆ ರಾತ್ರಿ ನಿಧನ ಹೊಂದಿದ್ದರು.ನಾಳೆ ರವಿ ಪೂಜಾರಿಯ ಮಲ್ಪೆ ಸಮೀಪದ ನೆರ್ಗಿಯ ಹಿರಿಯರ ಮನೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.
ರವಿ ಪೂಜಾರಿ ಅವರ ತಾಯಿಯ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಭೇಟಿ ನೀಡುವ ಸಂಬಂಧ, ನ್ಯಾಯಾಲಯವು ಅನುಮತಿ ನೀಡಿದೆ ಎಂದು ಮಾಹಿತಿ ತಿಳಿದು ಬಂದಿದೆ.
“ಭದ್ರತಾ ವ್ಯವಸ್ಥೆಯನ್ನು ಬೆಂಗಳೂರು ಕಾರಾಗೃಹ ಇಲಾಖೆಯವರು ಒದಗಿಸಲಿದ್ದಾರೆ. ಹೆಚ್ಚುವರಿ ಸ್ಥಳೀಯ ಭದ್ರತೆಯನ್ನು ಉಡುಪಿ ಪೊಲೀಸರು ಒದಗಿಸಲಿದ್ದಾರೆ” ಎಂದು ಉಡುಪಿ ಎಸ್ ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.




