Home Latest ಕಾಪು: ಮನೆಯ ಮೇಲ್ಛಾವಣಿ ಕುಸಿತ : ಮಹಿಳೆ ಪವಾಡಸದೃಶ ಪಾರು…!!

ಕಾಪು: ಮನೆಯ ಮೇಲ್ಛಾವಣಿ ಕುಸಿತ : ಮಹಿಳೆ ಪವಾಡಸದೃಶ ಪಾರು…!!

ಕಾಪು : ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಮಹಿಳೆಯೊಬ್ಬರು ಪವಾಡ ಸದೃಶ ಪಾರಾದ ಘಟನೆ ಎಲ್ಲೂರಿನಲ್ಲಿ ನಡೆದಿದೆ.

ಎಲ್ಲೂರಿನ ರೇವತಿ ಕುಂದರ್ ಅವರಿಗೆ ಸೇರಿದ ಮನೆಯ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದಿದ್ದು, ಮರದ ತುಂಡುಗಳು ರೇವತಿ ಅವರು ಮಲಗಿದ್ದ ಕೊಠಡಿಗೆ ಬಿದ್ದಿವೆ. ಘಟನೆಯಲ್ಲಿ ರೇವತಿ ಅವರು ಪವಾಡಸದೃಶವಾಗಿ ಅಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.

ಮನೆಯ ಇತರ ಕೊಠಡಿಗಳಲ್ಲಿ ಮಲಗಿದ್ದ ಕುಟುಂಬದ ಸದಸ್ಯರೂ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಮೇಲ್ಛಾವಣಿ ಕುಸಿದ ಪರಿಣಾಮ ಮನೆಯ ಸುಮಾರು ಶೇ.75ರಷ್ಟು ಭಾಗ ಸಂಪೂರ್ಣ ಹಾನಿಗೊಳಗಾಗಿದೆ. ಘಟನೆಯಿಂದ ಸುಮಾರು 3 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಎಲ್ಲೂರು ಗ್ರಾಮ ಪಂಚಾಯತ್ ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.