Home Crime ಕುಂದಾಪುರ: ಕ್ಯಾನ್ಸರ್ ನೋವು ಸಹಿಸದೆ ವೃದ್ಧ ಆತ್ಮಹತ್ಯೆ…!!

ಕುಂದಾಪುರ: ಕ್ಯಾನ್ಸರ್ ನೋವು ಸಹಿಸದೆ ವೃದ್ಧ ಆತ್ಮಹತ್ಯೆ…!!

ಕುಂದಾಪುರ: ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಟೇಶ್ವರ ಗೋಪಾಡಿಯಲ್ಲಿ ನಡೆದಿದೆ.

ಮೃತಪಟ್ಟವರು ರಾಮ ಮಡಿವಾಳ (70), ಗೋಪಾಡಿ ಗ್ರಾಮ, ಕೋಟೇಶ್ವರ ನಿವಾಸಿ ಎಂದು ತಿಳಿದು ಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ರಾಮ ಮಡಿವಾಳ ಅವರಿಗೆ 6 ವರ್ಷಗಳ ಹಿಂದೆ ಗಂಟಲು ಮತ್ತು ಬಾಯಿಯ ಕ್ಯಾನ್ಸರ್‌ಗೆ ಶಸ್ತ್ರಚಿಕಿತ್ಸೆ ನಡೆದಿದ್ದು, ನಂತರ ಚಿಕಿತ್ಸೆ ಪಡೆಯುತ್ತಿದ್ದರು. ಗುಣಮುಖವಾಗದ ಕಾರಣ ನೋವು ಸಹಿಸಲು ಆಗುತ್ತಿಲ್ಲ ಎಂದು ಪುತ್ರಿ ರತ್ನ ಜೆ (45) ಅವರ ಬಳಿ ಆಗಾಗ ಹೇಳಿಕೊಳ್ಳುತ್ತಿದ್ದರು.

ಅಕ್ಟೋಬರ್ 9ರ ರಾತ್ರಿ 9:30ಕ್ಕೆ ತಮ್ಮ ರೂಮಿನಲ್ಲಿ ಮಲಗಿದ್ದ ಅವರು, ಅಕ್ಟೋಬರ್ 10ರ ಬೆಳಿಗ್ಗೆ 6 ಗಂಟೆಗೆ ಮನೆಯಲ್ಲಿ ಕಾಣಿಸಲಿಲ್ಲ. ಮನೆಯ ಬಾವಿ ಬಳಿ ಹುಡುಕಾಡಿದಾಗ ಬಾವಿಯಲ್ಲಿ ಪತ್ತೆಯಾಗಿದ್ದಾರೆ. ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅವರು ಬಂದು ಮೇಲಕ್ಕೆತ್ತಿ ನೋಡಿದಾಗ ಮೃತಪಟ್ಟಿರುವುದು ದೃಢಪಟ್ಟಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 34/2026, ಕಲಂ 194 BNSS ರಂತೆ ಪ್ರಕರಣ ದಾಖಲಾಗಿದೆ.