Home Crime ಬಂಟ್ವಾಳ : ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಅಗ್ನಿ ಅವಘಡ….!!

ಬಂಟ್ವಾಳ : ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಅಗ್ನಿ ಅವಘಡ….!!

ಬಂಟ್ವಾಳ: ನಗರದ ಮಂಗಳೂರು ರಸ್ತೆಯಲ್ಲಿರುವ ಇಲೆಕ್ಟ್ರಾನಿಕ್ಸ್ ಅಂಗಡಿಯೊಂದರಲ್ಲಿ ತಡರಾತ್ರಿ ಭೀಕರ ಬೆಂಕಿ ಕಾಣಿಸಿಕೊಂಡು ಕ್ಷಣಗಳಲ್ಲಿ ಪಕ್ಕದ ಮಳಿಗೆಗಳಿಗೆ ಹರಡಿ, ಐದಾರು ಮಳಿಗೆಗಳಿಗೆ ಭಾರೀ ಹಾನಿ ಆಗಿರುವ ಘಟನೆ ಸಂಭವಿಸಿದೆ.

ಬೆಂಕಿ ಅವಘಡದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಸರಕು ಸುಟ್ಟು ಭಸ್ಮವಾಗಿದೆ ಎಂದು ತಿಳಿದು ಬಂದಿದೆ.

ಸಂತೋಷ್ ಕುಮಾರ್ ಕೊಡಂಗೆಯವರ ಮಾಲಕತ್ವದ ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿದ್ದ ಸುಲಭ ಜ್ವಲನಶೀಲ ವಸ್ತುಗಳು ಮತ್ತು ಇಲೆಕ್ಟ್ರಾನಿಕ್ ಸಾಮಗ್ರಿಗಳ ಕಾರಣ ಬೆಂಕಿಯ ತೀವ್ರತೆ ಹೆಚ್ಚಾಗಿದೆ.

ಸ್ಥಳೀಯರು ಪ್ರಾರಂಭದಲ್ಲಿ ನಿಯಂತ್ರಿಸಲು ಯತ್ನಿಸಿದರೂ, ಬೆಂಕಿ ನಿಯಂತ್ರಣಕ್ಕೆ ಬರಲಿಲ್ಲ ಎಂದು ಹೇಳಲಾಗಿದೆ. ಬೆಂಕಿಯು ಪಕ್ಕದಲ್ಲಿದ್ದ ಹೋಟೆಲ್ ಟೈಲರಿಂಗ್‌ ಶಾಪ್, ಫಾಸ್ಟ್ ಫುಡ್ ಸೇರಿ ಹಲವಾರು ಸಣ್ಣಪುಟ್ಟ ಅಂಗಡಿಗಳಿಗೆ ಹರಡಿ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದು ಬಂದಿದೆ

ಬಂಟ್ವಾಳದಿಂದ ಅಗ್ನಿಶಾಮಕ ವಾಹನಗಳು ಘಟನಾ ಸ್ಥಳಕ್ಕೆ ದೌಡಯಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಸಿದೆ ಎಂದು ತಿಳಿದು ಬಂದಿದೆ.