Home Crime ಉಡುಪಿ: ರೈಲ್ವೇ ಟ್ರ್ಯಾಕ್ ಪಕ್ಕದ ತೋಡಿನಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ…!!

ಉಡುಪಿ: ರೈಲ್ವೇ ಟ್ರ್ಯಾಕ್ ಪಕ್ಕದ ತೋಡಿನಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ…!!

ಉಡುಪಿ: ನಗರದ ಟ್ರ್ಯಾಕ್ ತಪಾಸಣೆ ಮಾಡಲು ಹೋಗಿದ್ದ ಟ್ರ್ಯಾಕ್ ಮ್ಯಾನ್ ರೈಲ್ವೇ ಟ್ರ್ಯಾಕ್ ಪಕ್ಕದ ತೋಡಿನಲ್ಲಿ ಅಪರಿಚಿತ ಗಂಡಸಿನ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ UDR ಪ್ರಕರಣ ದಾಖಲಾಗಿದೆ.

ದಿನಾಂಕ 07.08.2026, ಬೆಳಿಗ್ಗೆ 11:00 ಗಂಟೆ
ರೈಲ್ವೇ ಲೈನ್ MAST ನಂಬರ್ 695/06 ರ ಹತ್ತಿರ, ಕಟಪಾಡಿ – ಉಡುಪಿ ರೈಲ್ವೇ ಮಾರ್ಗದಲ್ಲಿ ಮೃತ ಅಪರಿಚಿತ ಗಂಡಸು, ಅಂದಾಜು ವಯಸ್ಸು 35-40 ವರ್ಷ ಪ್ರಾಯದವರು ಎಂದು ತಿಳಿದು ಬಂದಿದೆ.

ಕಟಪಾಡಿ ರೈಲ್ವೇ ಲೈನ್ 699/0 ರಿಂದ ಉಡುಪಿ ರೈಲ್ವೇ ಲೈನ್ ವರೆಗೆ ಟ್ರ್ಯಾಕ್ ಲೈನ್ ಚೆಕ್ ಮಾಡುವ ಕೆಲಸ ಮಾಡಿಕೊಂಡು ಬರುವಾಗ ಶಂಕರ ನಾಯ್ಕ್ ಅವರು ರೈಲ್ವೇ ಟ್ರ್ಯಾಕ್‌ನ ಪಶ್ಚಿಮ ಭಾಗದ ನೀರು ಹರಿಯುವ ತೋಡಿನಲ್ಲಿ ಮೃತದೇಹವನ್ನು ಗಮನಿಸಿದ್ದಾರೆ.

ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಮೃತನ ಗುರುತು ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ದಿನಾಂಕ *07/08/2026 ರಂದು ಬೆಳಗಿನ ಜಾವ 4 ಗಂಟೆಯಿಂದ ಬೆಳಿಗ್ಗೆ 11:00 ಗಂಟೆಯ ಮಧ್ಯಾವಧಿಯಲ್ಲಿ ಚಲಿಸುತ್ತಿರುವ ರೈಲಿನಿಂದ ಈ ಅಪರಿಚಿತ ವ್ಯಕ್ತಿ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆ UDR ಕ್ರಮಾಂಕ: 48/2026 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿದೆ.