Home Dskshina Kannada ಬಂಟ್ವಾಳ : ಹಳ್ಳ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ…!!

ಬಂಟ್ವಾಳ : ಹಳ್ಳ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ…!!

ಬಂಟ್ವಾಳ : ಹಳ್ಳ ದಾಟುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಆಗಸ್ಟ್ 2ರಂದು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ರಾಯಿ ವರಂಗಲದಲ್ಲಿ ನಡೆದಿದೆ.

ಜೀವನ್ ಪಿಂಟೊ (42) ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಕರಾವಳಿಯಲ್ಲಿ ಭಾರೀ ಮಳೆಯ ಪರಿಣಾಮ ರಾಯಿ ವರಂಗಲ ಸಮೀಪದ ಹಳ್ಳದಲ್ಲಿ ಭಾರೀ ನೀರಿನ ರಭಸವಿತ್ತು. ಈ ವೇಳೆ ವ್ಯಕ್ತಿ ಹಳ್ಳ ದಾಟುತ್ತಿದ್ದ. ಕಾಲು ಜಾರಿದ ಪರಿಣಾಮ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.

ಕೊಚ್ಚಿ ಹೋದ ವ್ಯಕ್ತಿಯನ್ನ ಪತ್ತೆಹಚ್ಚಲು NDRF ತಂಡ ರಕ್ಷಣಾ ಕಾರ್ಯಕ್ಕಿಳಿದಿದೆ. ಬಂಟ್ವಾಳ ಅಗ್ನಿಶಾಮಕ ದಳ ತಂಡದಿಂದಲೂ ಶೋಧ ಕಾರ್ಯ ಮುಂದುವರಿದಿದೆ. 22 ಸಿಬ್ಬಂದಿಯನ್ನು ಒಳಗೊಂಡ NDRF ತಂಡದಿಂದ ಶೋಧ ಕಾರ್ಯ ನಡೆದಿದ್ದು, NDRF ಡೆಪ್ಯುಟಿ ಕಮಾಂಡೆಂಟ್ ಅಖಿಲೇಶ್ ಕುಮಾರ್ ಚೌಬೆ ಹಾಗೂ ಇನ್ಸ್‌ಪೆಕ್ಟರ್/ಜಿಡಿ ಶಾಂತಿ ಲಾಲ್ ಜಾಟಿಯಾ ಅವರ ತಂಡವು ಶೋಧ ಕಾರ್ಯದಲ್ಲಿ ಭಾಗವಹಿಸಿದ್ದವು.

ನಿನ್ನೆ ಕತ್ತಲಾದ ಕಾರಣ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದ್ದು, ಇಂದು ಮುಂದುವರಿಯಲಿದೆ