ಕಾರ್ಕಳ: ಮರದಿಂದ ಬಿದ್ದು ಚಿಕಿತ್ಸೆ ಪಡೆದು ನಡೆದಾಡಲು ಆಗದೇ ಮನೆಯಲ್ಲಿಯೇ ಇದ್ದ ಕಾಂತಾವರ ಗ್ರಾಮದ ಸುನಿಲ್ ಪೂಜಾರಿ (39) ಮಂಗಳವಾರ ಮೃತಪಟ್ಟಿದ್ದಾರೆ.
ಅವರು ಮಾ.21ರಂದು ದೂಪದಕಟ್ಟೆಯಲ್ಲಿ ಕೂಲಿ ಕೆಲಸ ಮಾಡುವಾಗ ಮರದಿಂದ ಬಿದ್ದು ಮಂಗಳೂರು ವೆನ್‌ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಏ.21ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ನಡೆದಾಡಲು ಆಗದೇ ಮನೆಯಲ್ಲಿಯೇ ಇದ್ದರು. ಇತ್ತೀಚೆಗೆ ಸುಮಾರು ಹತ್ತು ದಿನಗಳಿಂದ ಆರೋಗ್ಯ ಹದಗೆಟ್ಟಿದ್ದು, ಮಂಗಳವಾರ ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




