Home Crime ಉಡುಪಿಯ ಬಲಾಯಿಪಾದೆಯಲ್ಲಿ ಕಳ್ಳತನ ಪ್ರಕರಣದ ಕಾರು ಪತ್ತೆ…!!

ಉಡುಪಿಯ ಬಲಾಯಿಪಾದೆಯಲ್ಲಿ ಕಳ್ಳತನ ಪ್ರಕರಣದ ಕಾರು ಪತ್ತೆ…!!

ಉಡುಪಿ: ಉಡುಪಿ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳು ಗಸ್ತು ಕರ್ತವ್ಯದಲ್ಲಿದ್ದ ವೇಳೆ ಬಲಾಯಿಪಾದೆ ಬಳಿ ಹಲವು ದಿನಗಳಿಂದ ಅನುಮಾನಾಸ್ಪದವಾಗಿ ನಿಂತಿದ್ದ ಕಾರೊಂದನ್ನು ಪತ್ತೆಹಚ್ಚಿದ್ದಾರೆ.

ಪರಿಶೀಲನೆ ನಡೆಸಿದ ವೇಳೆ, ಆ ವಾಹನವು ಹುಬ್ಬಳ್ಳಿ–ಧಾರವಾಡ ಕಮಿಷನರೇಟ್ ವ್ಯಾಪ್ತಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದೆ ಎಂಬುದು ಬೆಳಕಿಗೆ ಬಂದಿದೆ.

ಅ. ಕೃ. 109/2026ರ ಪ್ರಕರಣಕ್ಕೆ ಸೇರಿದ ಈ ವಾಹನವನ್ನು ವಶಕ್ಕೆ ಪಡೆದು, ಸಂಬಂಧಪಟ್ಟ ಠಾಣೆಗೆ ಮಾಹಿತಿ ನೀಡಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಟ್ರಾಫಿಕ್ ಎಸ್ ಐ ಮಹೇಶ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.