Home Crime ಉಳ್ಳಾಲ: ವಿದ್ಯುತ್ ಶಾಕ್ ತಗುಲಿ ಲೈನ್ ಮ್ಯಾನ್ ಮೃತ್ಯು…!!

ಉಳ್ಳಾಲ: ವಿದ್ಯುತ್ ಶಾಕ್ ತಗುಲಿ ಲೈನ್ ಮ್ಯಾನ್ ಮೃತ್ಯು…!!

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಉಚ್ಚಿಲದ ನಯಾಪಟ್ಣಾ ಎಂಬಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಏರಿದ ಮೆಸ್ಕಾಂ ಲೈನ್ ಮ್ಯಾನ್ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ವರದಿಯಾಗಿದೆ.

ಮೃತರನ್ನು ಅಂಬಿಕಾ ರೋಡ್, ಪಿಲಾರುವಿನ ನಿವಾಸಿ ಶೇಖ್ ಝಮೀರ್ (49) ಎಂದು ಗುರುತಿಸಲಾಗಿದೆ.

ಅವರು ಮೆಸ್ಕಾಂ ಕಂಪೆನಿಯಲ್ಲಿ ಲೈನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಉಚ್ಚಿಲ ನಯಾಪಟ್ಣಾದ ಟ್ರಾನ್ಸ್ ಫಾರ್ಮರ್ ನಲ್ಲಿ ವಿದ್ಯುತ್‌ ದೋಷದ ಬಗ್ಗೆ ಮೆಸ್ಕಾಂಗೆ ದೂರು ಬಂದಿದ್ದು,ಈ ಹಿನ್ನಲೆಯಲ್ಲಿ ಶೇಖ್ ಝಮೀರ್ ಹಾಗೂ ಸಹೋದ್ಯೋಗಿ ಸಂಗಪ್ಪ ಎಂಬವರು ಇಂದು ಬೆಳಿಗ್ಗೆ ಸ್ಥಳಕ್ಕೆ ದುರಸ್ಥಿಗೆ ಹೋಗಿದ್ದರು ಎಂದು ತಿಳಿದು ಬಂದಿದೆ.

ಈ ಸಂದರ್ಭ ಜಿಒಎಸ್‌ ಆಫ್ ಆಗಿದೆಯೆಂದು ಗ್ರಹಿಸಿ ಟ್ರಾನ್ಸ್ ಫಾರ್ಮರ್ ಏರಿದ ಝಮೀರ್ ವಿದ್ಯುತ್ ಆಘಾತಕ್ಕೊಳಗಾಗಿ ಎಸೆಯಲ್ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಗಂಭೀರ ಸ್ಥಿತಿಯಲ್ಲಿದ್ದ ಝಮೀರ್ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.