ಉಡುಪಿ : ಮಣಿಪಾಲದಲ್ಲಿ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.
ಹೆರೂರು ಗ್ರಾಮದ ಸಿಆರ್‌ಎಸ್ ಸೈಟ್‌ನ ನಿವಾಸಿ ಗೌರಮ್ಮ ಅವರ ಪುತ್ರ ಆದಿತ್ಯ (21) ಮಣಿಪಾಲದ ಕೆಎಂಸಿ ಆಸ್ಪತ್ರೆ ಎದುರಿನ ಕೆನರಾ ಮಾಲ್ ಬಳಿಯ ಕಿಣಿ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದು, ಈಶ್ವರ ನಗರದ ರಾಮಕೃಷ್ಣ ಗೆಸ್ಟ್ ಹೌಸ್‌ನಲ್ಲಿ ವಾಸವಾಗಿದ್ದರು.
ಪೊಲೀಸರ ಮಾಹಿತಿ ಪ್ರಕಾರ, ಆದಿತ್ಯ ಅವರಿಗೆ ಅತಿಯಾದ ಮದ್ಯಪಾನದ ಚಟವಿದ್ದು, ಇದೇ ಕಾರಣದಿಂದ ಅಥವಾ ಇತರೆ ವೈಯಕ್ತಿಕ ಕಾರಣಗಳಿಂದ ಮನನೊಂದು, ಜುಲೈ 29ರ ಮುಂಜಾನೆ 2.30ರಿಂದ 5.37ರ ಅವಧಿಯಲ್ಲಿ ತಾವು ವಾಸವಾಗಿದ್ದ ಕೊಠಡಿಯಲ್ಲಿ ಫ್ಯಾನಿನ ಹುಕ್ಕಿಗೆ ಬಾತ್ ಟವೆಲ್ ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ




