ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಬೈಕಿಗೆ ಆಟೋ ರಿಕ್ಷಾ ವೊಂದು ಢಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವರು ಚಾರ್ಲಿ ಮಸ್ಕರೇನಸ್ ಎಂದು ತಿಳಿದು ಬಂದಿದೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಸಾರಾಂಶ : ದಿನಾಂಕ 15.12.2025 ರಂದು ಪಿರ್ಯಾದಿದಾರ ಸ್ಟೀವನ್ ಮಸ್ಕರೇನಸ್ (40), ತಂದೆ: ಪೆಲಿಕ್ಸ್ ಮಸ್ಕರೇನಸ್, ವಾಸ: 1-103, ಹಾವಂಜೆ ತೋಟಾ, ಹಾವಂಜೆ ಗ್ರಾಮ ಇವರು ಮೊಟಾರ್ ಸೈಕಲ್ ನಲ್ಲಿ ಹಾವಂಜೆ ಪೆಟ್ರೋಲ್ ಬಂಕ್ ನಿಂದ ಹಾವಂಜೆ – ಕೊಳಲಗಿರಿ ಮಾರ್ಗವಾಗಿ ಅವರ ಮನೆ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ಸಮಯ ಬೆಳಿಗ್ಗೆ 07:45 ಗಂಟೆಗೆ ಹಾವಂಜೆ ಗ್ರಾಮದ ಮುಗ್ಗೇರಿ ಮಠ ಕ್ರಾಸ್ ಹತ್ತಿರ ತಲುಪುವಾಗ ಅವರ ವಿರುದ್ಧ ದಿಕ್ಕಿನಲ್ಲಿ ಅಂದರೆ ಕೊಳಲಗಿರಿ ಕಡೆಯಿಂದ ರಾಜೇಂದ್ರ ಎಂಬವರು ಅವರ ಬಾಬ್ತು KA-20-AB-9704 ನಂಬ್ರದ ಆಟೋ ರಿಕ್ಷಾವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ತಿರುವು ರಸ್ತೆಯಲ್ಲಿ ಅವರ ತೀರಾ ಬಲ ಬದಿಗೆ ಚಲಾಯಿಸಿ ಫಿರ್ಯಾದಿದಾರರ ಎದುರಿನಿಂದ ಕೊಳಲಗಿರಿ ಕಡೆಗೆ ಚಾರ್ಲಿ ಮಸ್ಕರೇನಸ್ ರವರು ಸವಾರಿ ಮಾಡುತ್ತಿದ್ದ KA-20-Y-0023 ನೊಂದಣಿ ನಂಬ್ರದ TVS XL ಸ್ಕೂಟರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಚಾರ್ಲಿ ಮಸ್ಕರೇನಸ್ ರವರು ರಸ್ತೆಯ ದಕ್ಷಿಣ ಭಾಗಕ್ಕೆ ಬಿದ್ದು, ಅವರ ತಲೆಗೆ, ಬೆನ್ನಿಗೆ ರಕ್ತ ಗಾಯವಾಗಿದ್ದು, ಅವರು ಧರಿಸಿದ್ದ ಹೆಲ್ಮೆಟ್ ಪುಡಿಯಾಗಿ ಎರಡೂ ವಾಹನಗಳು ಜಖಂಗೊಂಡಿರುತ್ತದೆ. ಗಾಯಗೊಂಡ ಚಾರ್ಲಿ ಮಸ್ಕರೇನಸ್ ರವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲದ KMC ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಚಾರ್ಲಿ ಮಸ್ಕರೇನಸ್ ರವರು ದಾರಿ ಮಧ್ಯೆಯೇ ಮೃತಪಟ್ಟಿರುವ ಬಗ್ಗೆ ವೈಧ್ಯರು ತಿಳಿಸಿರುತ್ತಾರೆ.
ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ: 256/2025 U/S 281, 106 ಬಿಎನ್‌ಎಸ್-2023 ರಂತೆ ಪ್ರಕರಣ ದಾಖಲಾಗಿರುತ್ತದೆ.



