Home Karavali Karnataka 5 ಲಕ್ಷ ವೆಚ್ಚದಲ್ಲಿ ಅಸ್ತಪಡ್ಪು ಕೆಲ್ಲಾರು ದೈವರಾಜ ಕೋಡ್ದಬ್ಬು ದೈವಸ್ಥಾನ ಮೇಲ್ಚಾವಣಿ ನಿರ್ಮಾಣ…!!

5 ಲಕ್ಷ ವೆಚ್ಚದಲ್ಲಿ ಅಸ್ತಪಡ್ಪು ಕೆಲ್ಲಾರು ದೈವರಾಜ ಕೋಡ್ದಬ್ಬು ದೈವಸ್ಥಾನ ಮೇಲ್ಚಾವಣಿ ನಿರ್ಮಾಣ…!!

ಕಾಪು : ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಸ್ತಪಡ್ಪು ಕೆಲ್ಲಾರು ದೈವರಾಜ ಕೋಡ್ದಬ್ಬು ದೈವಸ್ಥಾನ ಮೇಲ್ಚಾವಣಿ ನಿರ್ಮಾಣಕ್ಕೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ ಶಾಸಕರಾದ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 5 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿದ್ದು ಇದರ ಉದ್ಘಾಟನೆಯನ್ನು ಇಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಪಲಿಮಾರು ಗ್ರಾಮ ಪಂಚಾಯತ್ ಸದಸ್ಯರಾದ ಗಾಯತ್ರಿ ಪ್ರಭು,ಸುಜಾತ ಸ್ಥಳೀಯರಾದ ಭಾಸ್ಕರ್ ಶೆಟ್ಟಿ, ದೈವಸ್ಥಾನದ ಗುರಿಕಾರರು, ಕಾರ್ಯಕರ್ತರು ಉಪಸ್ಥಿತರಿದ್ದರು.