Home Crime ಉಡುಪಿ : ಮನೆಯಿಂದ ಹೊರಗೆ ಹೋದ ಮಹಿಳೆಯೊಬ್ಬರು ನಾಪತ್ತೆ…!!

ಉಡುಪಿ : ಮನೆಯಿಂದ ಹೊರಗೆ ಹೋದ ಮಹಿಳೆಯೊಬ್ಬರು ನಾಪತ್ತೆ…!!

ಉಡುಪಿ: ನಗರದ ಸಮೀಪ ಮಹಿಳೆಯೊಬ್ಬರು ಮನೆಯಿಂದ ಹೊರಗೆ ಹೋದವರು ವಾಪಸ್ಸು ಬಾರದೇ ಕಾಣೆಯಾಗಿದ್ದಾರೆ.

ಕಾಣೆಯಾದ ಮಹಿಳೆ ಸೀತಾ ನಾಯಕ್ ಎಂದು ತಿಳಿಯಲಾಗಿದೆ.

ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ಪಿರ್ಯಾದಿದಾರರಾದ ಅಮೃತ ನಾಯಕ್(41), ಶಿವಳ್ಳಿ ಗ್ರಾಮ, ಉಡುಪಿ ಇವರ ತಾಯಿ ಸೀತಾ ನಾಯಕ್ (66) ರವರು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕುಂಜಿಬೆಟ್ಟುವಿನಲ್ಲಿರುವ ಸಾಯಿ ರಾಧಾ ನೆಸ್ಟ್ ಅಪಾರ್ಟಮೆಂಟ್ ನಲ್ಲಿ ವಾಸಮಾಡಿಕೊಂಡಿರುತ್ತಾರೆ. ಸೀತಾನಾಯಕ್ ರವರು ಮಾನಸಿಕ ಖಿನ್ನತೆಯ ಬಗ್ಗೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು. ದಿನಾಂಕ 16/12/2025 ರಂದು ಮಧ್ಯಾಹ್ನ ಪಿರ್ಯಾದಿದಾರರು ಮನೆಯ ರೂಮಿನಲ್ಲಿ ಕೆಲಸ ಮಾಡಿಕೊಂಡಿದ್ದು ಸಂಜೆ 4 ಗಂಟೆಗೆ ರೂಮಿನಿಂದ ಹೊರಗೆ ಬಂದು ನೋಡಿದಾಗ ತಾಯಿ ರವರು ಕಾಣಿಸದೇ ಇದ್ದು, ನಂತರ ಅಪಾರ್ಟಮೆಂಟಿನ ಸುತ್ತಾ-ಮುತ್ತಾಲು ಹುಡುಕಾಟ ನಡೆಸಿದ್ದು, ಬಳಿಕ ಸ್ನೇಹಿತೆ ಜ್ಯೋತಿ ಎಂಬುವವರ ಮನೆಗೆ ಹೋಗಿರಬಹುದು ಎಂದು ತಿಳಿದು ಅಲ್ಲಿ ಹೋಗಿ ವಿಚಾರಿಸಿದಾಗಲೂ ಅಲ್ಲಿಗೂ ಹೋಗದೇ ಇರುವುದು ಕಂಡು ಬಂದಿರುತ್ತದೆ. ಅಪಾರ್ಟಮೆಂಟಿನ ಸಿಸಿ ಕ್ಯಾಮಾರವನ್ನು ಪರಿಶೀಲಿಸಿದಾಗ ತಾಯಿ ರವರು ಮಧ್ಯಾಹ್ನ 1:47 ಗಂಟೆಗೆ ಅಪಾರ್ಟಮೆಂಟಿನ ಗೇಟ್ ನಂಬ್ರ 2 ರಿಂದ ಹೊರಗೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿರುತ್ತದೆ. ನಂತರ ಪಿರ್ಯಾದಿದಾರರು ಅವರಿಗೆ ಪರಿಚಯವಿರುವ ಸ್ನೇಹಿತರಿಗೆ ಹಾಗೂ ಬೆಂಗಳೂರಿನಲ್ಲಿರುವ ಅಣ್ಣ ಶರತ್ ನಾಯಕ್ ರವರಿಗೂ ಕರೆ ಮಾಡಿ ಸೀತಾ ನಾಯಕ್ ರವರ ಬಗ್ಗೆ ವಿಚಾರಿಸಿದಾಗ ಅಲ್ಲಿಯೂ ಹೋಗದೇ, ವಾಪಸ್ಸು ಮನೆಗೂ ಬಾರದೇ ಕಾಣೆಯಾಗಿರುತ್ತಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 213/2025, ಕಲಂ: ಹೆಂಗಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.