ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪ ಮಹಾದೇವಿ ಟೂರಿಸ್ಟ್ ಹೋಮ್ ಎಂಬ ಲಾಡ್ಜ್ ನಲ್ಲಿ ವೈಶ್ಯಾವಾಟಿಕೆ ನಡೆಯುತ್ತಿದ್ದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಯತಿರಾಜ್ ಪೊಲ್ಯ ಶೆಟ್ಟಿ ಹಾಗೂ ನವೀನ್ ಪೂಜಾರಿ ಎಂದು ಗುರುತಿಸಲಾಗಿದೆ.
ಪೊಲೀಸರು ದಾಳಿ ನಡೆಸಿ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ಪಡುಬಿದ್ರಿ ಪೊಲೀಸ್ ಠಾಣೆಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿಯಂತೆ ದಿನಾಂಕ: 14/12/2025 ರಂದು ನಡ್ಸಾಲು ಗ್ರಾಮದ ರಾ.ಹೆ 66 ರ ಪಕ್ಕದಲ್ಲಿರುವ ಮಹಾದೇವಿ ಟೂರಿಸ್ಟ್ ಹೋಮ್ ಎಂಬ ಕಟ್ಟಡದಲ್ಲಿ ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಮಹಿಳೆಯರನ್ನು ಪುಸಲಾಯಿಸಿ ಕಳ್ಳಸಾಗಾಣಿಕೆ ಮಾಡಿ ವೈಶ್ಯಾವಾಟಿಕೆ ನಡೆಸುತ್ತಿರುವ ಸದ್ರಿ ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ದಾಳಿ ನಡೆಸಿ ಸಂತೃಸ್ಥ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿರುತ್ತದೆ. ಆರೋಪಿ ಯತಿರಾಜ್ ಪೊಲ್ಯ ಶೆಟ್ಟಿ ಮತ್ತು ನವೀನ್ ಪೂಜಾರಿಯ ಎಂಬವರನ್ನು ದಸ್ತಗಿರಿಮಾಡಲಾಗಿದೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 147/2025 ಕಲಂ: 143 ಬಿಎನ್‌ಎಸ್, ಕಲಂ 3(1), 4, 5 Immoral Traffic Prevention Act 1956 ರಂತೆ ಪ್ರಕರಣ ದಾಖಲಾಗಿರುತ್ತದೆ



