Home Karkala News ಕಾರ್ಕಳ : ಬೆಂಕಿಗೆ ಹಲವು ಗಿಡಗಳು ಬಲಿ…!!  

ಕಾರ್ಕಳ : ಬೆಂಕಿಗೆ ಹಲವು ಗಿಡಗಳು ಬಲಿ…!!  

ಕಾರ್ಕಳ: ಸಾರ್ವಜನಿಕ ಹಿಂದೂ ರುದ್ರಭೂಮಿ ವ್ಯವಸ್ಥಾಪನಾ ಸಮಿತಿ ಹಾಗೂ ನೆಕ್ಲಾಜೆ ಶ್ರೀ ಕಾಳಿಕಾಂಬಾ ಆಡಳಿತ ಮಂಡಳಿಯ ಜಂಟಿ ಆಶ್ರಯದಲ್ಲಿ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ನೆಡಲಾಗಿದ್ದ ಹಲವು ಗಿಡಗಳು ಕಿಡಿಗೇಡಿಗಳ ಕೃತ್ಯದಿಂದ ಬೆಂಕಿಗೆ ಸಿಲುಕಿ ಸುಟ್ಟು ಹೋಗಿವೆ.

ಎರಡು ವರ್ಷಗಳ ಹಿಂದೆ ಕಾಳಜಿಯಿಂದ ನೆಟ್ಟು ಪೋಷಿಸಲಾಗುತ್ತಿದ್ದ ನೇರಳೆ, ಬೀರುಂಡಿ, ಹಲಸು, ಮಾವು ಸೇರಿದಂತೆ ವಿವಿಧ ಜಾತಿಯ ಫಲಭರಿತ ಹಾಗೂ ನೆರಳಿನ ಗಿಡಗಳು ಈ ಬೆಂಕಿಯಲ್ಲಿ ಭಸ್ಮವಾಗಿವೆ.

ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ರುದ್ರಭೂಮಿ ವ್ಯವಸ್ಥಾಪನಾ ಸಮಿತಿ ಪ್ರಮುಖರಾದ ಪ್ರಕಾಶ್ ರಾವ್, ಗಿಡಗಳನ್ನು ನೆಡುವುದು ಎಷ್ಟು ಮುಖ್ಯವೋ, ಅವುಗಳನ್ನು ರಕ್ಷಿಸಿ ಪೋಷಿಸುವುದು ಅಷ್ಟೇ ಸವಾಲಿನ ಕೆಲಸ.

ಕಿಡಿಗೇಡಿಗಳ ಬೀಡಿ, ಸಿಗರೇಟು ಸೇದಿ ಎಸೆದ ಪರಿಣಾಮ ಬೆಂಕಿ ಹರಡಿಕೊಂಡು ಗಿಡಗಳು ಸುಟ್ಟುಹೋಗಿದೆ ಎಂದು ತಿಳಿಸಿದರು.