Home Karavali Karnataka ರಸ್ತೆಯಲ್ಲಿ ಸಿಕ್ಕಿರುವ ಹಣದ ಪರ್ಸ್ ವಾರಿಸುದಾರರಿಗೆ ನೀಡಿ : ಹೃದಯವಂತಿಕೆ ಮೆರೆದ : ಗಂಗೊಳ್ಳಿ ಪೊಲೀಸ್...

ರಸ್ತೆಯಲ್ಲಿ ಸಿಕ್ಕಿರುವ ಹಣದ ಪರ್ಸ್ ವಾರಿಸುದಾರರಿಗೆ ನೀಡಿ : ಹೃದಯವಂತಿಕೆ ಮೆರೆದ : ಗಂಗೊಳ್ಳಿ ಪೊಲೀಸ್ ಸಿಬ್ಬಂದಿ ರಾಘವೇಂದ್ರ ಪೂಜಾರಿ…!!

ಕುಂದಾಪುರ: ಕರ್ತವ್ಯದ ವೇಳೆ ತ್ರಾಸಿ ಕಡೆಯಿಂದ ಗಂಗೊಳ್ಳಿ ಕಡೆಗೆ ಹೋಗುತ್ತಿರುವ ವೇಳೆ ಗುಜ್ಜಾಡಿ ಎಂಬಲ್ಲಿ ರಸ್ತೆಯ ಬದಿಯಲ್ಲಿ ಹಣದ ಪರ್ಸ್ ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ರಾಘವೇಂದ್ರ ಪೂಜಾರಿ ಯವರಿಗೆ ಸಿಕ್ಕಿರುತ್ತದೆ.

ತಕ್ಷಣ ಸಿಕ್ಕಿರುವ ಹಣದ ಪರ್ಸ್ ಅನ್ನು ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಮಾನವತಿಯ ಹೃದಯವಂತಿಕೆ ಮೆರೆದಿದ್ದಾರೆ

12.12.2025 ರಂದು ಶುಕ್ರವಾರ ಮಧ್ಯಾಹ್ನ ಮಹಾಬಲ ಕೊಠಾರಿ 76 ವರ್ಷ ಹೆದ್ದಾರಿ ಮನೆ ಗುಜ್ಜಾಡಿ ರವರು ತೆಂಗಿನಕಾಯಿ ವ್ಯಾಪಾರ ಮಾಡಿ 10700 ಹಣವನ್ನು ಪರ್ಸಿನಲ್ಲಿಟ್ಟುಕೊಂಡು ಮನೆ ಕಡೆಗೆ ಬರುವ ವೇಳೆ ಗುಜ್ಜಾಡಿ ಬಳಿ ಕಳೆದುಕೊಂಡಿರುತ್ತಾರೆ. ಎನ್ನಲಾಗಿದೆ

ಹಣದ ಪರ್ಸನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ರಾಘವೇಂದ್ರ ಪೂಜಾರಿ ರವರು ವಾರಿಸುದಾರರಾದ ಮಹಾಬಲ ಕೊಠಾರಿ ಅವರಿಗೆ ಹಸ್ತಾಂತರಿಸಿ ಶ್ಲಾಘನೀಯ ಕರ್ತವ್ಯ ನಿಷ್ಠೆಯ ಜೊತೆಯಲ್ಲಿ ಮಾನವೀಯತೆಯ ಹೃದಯವಂತ ಪೊಲೀಸ್ ಸಿಬ್ಬಂದಿ ರಾಘವೇಂದ್ರ ಪೂಜಾರಿಯವರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ

ಇವರ ಮಾನವೀಯತೆಯ ಹೃದಯವಂತಿಕೆಯ ಕರ್ತವ್ಯ ನಿಷ್ಠೆಗೆ ಗಂಗೊಳ್ಳಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಪವನ್ ನಾಯಕ್ ಹಾಗೂ ಸಿಬ್ಬಂದಿಗಳು ಮತ್ತು ಉಡುಪಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ