ಕುಂದಾಪುರ: ಮಂಡಾಡಿ ಹೋರ್ವರcಮನೆಯ
ಕಂಬಳೋತ್ಸವ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಮಂಡಾಡಿ ಹೋರ್ವರಮನೆ ಸಾಂಪ್ರದಾಯಿಕ ಕಂಬಳೋತ್ಸವದಲ್ಲಿ ಕುಂದಾಪುರ,ಬೈಂದೂರು,ಭಟ್ಕಳ,ಉಡುಪಿ,ಕಾರ್ಕಳ ಭಾಗದ ಸುಮಾರು ಐವತ್ತಕ್ಕೂ ಅಧಿಕ ಜೊತೆ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಕನೆಹಲಗೆ ವಿಭಾಗ,ಹಗ್ಗ ಹಿರಿಯ ವಿಭಾಗ,ಹಗ್ಗ ಕಿರಿಯ ವಿಭಾಗ,ಸಬ್ ಜ್ಯೂನಿಯರ್ ವಿಭಾಗ,ಕೆಸರು ಗದ್ದೆ ಓಟ ನಡೆಯಿತು.ವಿಜೇತ ಕೋಣಗಳ ಮಾಲೀಕರಿಗೆ ಹಾಗೂ ಓಟ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪಧಾಳುಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.ಹೋರ್ವರ ಮನೆ ಕಂಬಳೋತ್ಸವದಲ್ಲಿ ಭಾಗವಹಿಸಿದ ಕೋಣಗಳ ತಂಡಕ್ಕೆ ಗೌರವಧನವನ್ನು ನೀಡಲಾಯಿತು.ಹಗಲು,ಇರುಳು ನಡೆದ ಕಂಬಳೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿದರು.
ಮಣೂರು ಗೀತಾನಂದ ಫೌಂಡೇಶನ್ನನ ಪ್ರವರ್ತಕ ಆನಂದ ಸಿ. ಕುಂದರ್ ಅವರು ಮಂಡಾಡಿ ರತ್ನಾಕರ ಶೆಟ್ಟಿ ವೇದಿಕೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭ ಆನಂದ ಸಿ.ಕುಂದರ್ ಅವರನ್ನು ಸಮ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕುಂದಾಪುರದ ನ್ಯೂ ಮೆಡಿಕಲ್ ಸೆಂಟರ್ ಇದರ ಆಡಳಿತ ನಿರ್ದೇಶಕ ಡಾ। ರಂಜನ್ ಶೆಟ್ಟಿ ಎನ್.ಮಂಜಯ್ಯ ಶೆಟ್ಟಿ ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ ಬಿದ್ದಲ್‌ಕಟ್ಟೆ ಇದರ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ಮೊಳಹಳ್ಳಿ ಉದ್ಯಮಿ ಎಂ.ದಿನೇಶ್ ಹೆಗ್ಡೆ ಮೊಳಹಳ್ಳಿ ಉದ್ಯಮಿ ಆದರ್ಶ ಶೆಟ್ಟಿ ಮಂಡಾಡಿ ಹೋರ್ವರಮನೆ, ಸಂತೋಷ ಶೆಟ್ಟಿ ಮಂಡಾಡಿ ಹೋರ್ವರಮನೆ, ಕರುಣಾಕರ ಕೊಠಾರಿ ಮಂಡಾಡಿ, ಜಯರಾಮ ಶೆಟ್ಟಿ
ಮಂಡಾಡಿ ಹೋರ್ವರಮನೆ, ಲಕ್ಷ್ಮಣ ಶೆಟ್ಟಿ ಮಂಡಾಡಿ ಹೋರ್ವರಮನೆ, ಕಂಬಳ ಅಭಿಮಾನಿಗಳು ಉಪಸ್ಥಿತರಿದ್ದರು.
ಆದರ್ಶ ಶೆಟ್ಟಿ ಮಂಡಾಡಿ ಹೋರ್ವರ ಮನೆ ಸ್ವಾಗತಿಸಿ, ಎನ್. ಮಂಜಯ್ಯ ಶೆಟ್ಟಿ ಪ್ರಾಸ್ತಾವನೆಗೈದು, ಉಪನ್ಯಾಸಕ ಉದಯ ಕುಮಾರ್ ಶೆಟ್ಟಿ ಕಾಳಾವರ, ಅಭಿಜಿತ್ ಪಾಂಡೇಶ್ವರ ನಿರೂಪಿಸಿ, ಜಯರಾಮ ಶೆಟ್ಟಿ ಮಂಡಾಡಿ ಹೋರ್ವರಮನೆ ವಂದಿಸಿದರು.
ಕಾಂತಾರ ಖ್ಯಾತಿಯ ಹಿರಿಯ ದೈವ ನರ್ತಕ ನಾಗರಾಜ ಪಾಣ ಅಂಪಾರು ಅವರು ಸಂಪ್ರದಾಯದಂತೆ ಪಾಡ್ಡನ ಗಳನ್ನು ನುಡಿದರು.




