Home Crime ಬೈಂದೂರು: ಮರವಂತೆ ಬೀಚಿನಲ್ಲಿ ಅಕ್ರಮವಾಗಿ ಕೆಂಪು ಮಣ್ಣು ತುಂಬಿಸಿ : ಜಿಲ್ಲಾಧಿಕಾರಿಗಳ ಆದೇಶ ಗಾಳಿಗೆ ತೂರಿದ...

ಬೈಂದೂರು: ಮರವಂತೆ ಬೀಚಿನಲ್ಲಿ ಅಕ್ರಮವಾಗಿ ಕೆಂಪು ಮಣ್ಣು ತುಂಬಿಸಿ : ಜಿಲ್ಲಾಧಿಕಾರಿಗಳ ಆದೇಶ ಗಾಳಿಗೆ ತೂರಿದ ಗೂಡ ಅಂಗಡಿ ಮಾಲೀಕರು…!!

ಬೈಂದೂರು: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮರವಂತೆ ವರಹ ಸ್ವಾಮಿ ದೇವಸ್ಥಾನದ ಎದುರುಗಡೆ ಅಕ್ರಮವಾಗಿ ತಲೆ ಎತ್ತಿ ನಿಂತಿರುವ ಬೀಡ ಅಂಗಡಿಗಳು ಈ ಹಿಂದೆ ತ್ರಾಸಿ – ಹಾಗೂ ಮರವಂತೆ ಬೀಚ್ ಗೆ ರಾಜ್ಯ ಸರ್ಕಾರ ಬೀಚ್ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಾಕಷ್ಟು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಮುಂದಾಗಿದೆ, ಹಿನ್ನಲೆಯಲ್ಲಿ ಬೀಚಿನ ಬಳಿ ಇರುವ ಎಲ್ಲಾ ಅಂಗಡಿಗಳನ್ನು ತೆರವು ಮಾಡಲಾಯಿತು ಆದರೆ ಮರವಂತೆ ಭಾಗದಲ್ಲಿ ಮಾತ್ರ ಅಂಗಡಿಗಳು ಹಾಗೆ ತಲೆ ಎತ್ತಿ ನಿಂತುಬಿಟ್ಟಿದೆ,

ಹೌದು ಈ ಹಿಂದೆ ಹಲವು ಬಾರಿ ಮರವಂತೆ ವರಹ ಸ್ವಾಮಿ ದೇವಸ್ಥಾನದ ಎದುರುಗಡೆ ಇರುವ ಅಂಗಡಿಗಳನ್ನು ತೆರವು ಮಾಡಲು ಜಿಲ್ಲಾಧಿಕಾರಿಗಳು ಸ್ಥಳೀಯ ಗ್ರಾಮ ಪಂಚಾಯಿತಿಗೆ ಹಾಗೂ ಬೈಂದೂರು ತಾಸಿಲ್ದಾರರಿಗೆ ಆದೇಶ ಮಾಡಲಾಗಿದೆ,

ಆದರೆ ಅಂಗಡಿಗಳು ಮಾತ್ರ ತೆರವು ಮಾಡದೆ ತಲೆ ಎತ್ತಿ ಹಾಗೆಯೇ ನಿಂತುಬಿಟ್ಟಿದೆ ಇದು ಯಾರ ಕೃಪ ಕಟಾಕ್ಷದ ಒಲವು ತೋರಿದೆ ಎಂಬುವುದು ಯಕ್ಷ ಪ್ರಶ್ನೆಯಾಗಿ ಸಾರ್ವಜನಿಕ ವಲಯದಲ್ಲಿ ಉಳಿದಿದೆ

ಪ್ರವಾಸೋದ್ಯಮ ಇಲಾಖೆ ಬೀಚ್ ಅಭಿವೃದ್ಧಿ ಅಡಿಯಲ್ಲಿ ಹಾಗೂ ಸೌಂದರ್ಯದ ಹಿನ್ನೆಲೆಯಲ್ಲಿ ಬೀಚಿನ ಬಳಿ ಇರುವ ಎಲ್ಲಾ ಅಂಗಡಿಗಳನ್ನು ತೆರವು ಮಾಡಬೇಕೆಂದು ಆದೇಶ ಇದ್ದರೂ ಕೂಡ !! ಇಲ್ಲಿ ಮಾತ್ರ ಜಿಲ್ಲಾ ಆಡಳಿತ ಮತ್ತು ಜಿಲ್ಲಾಧಿಕಾರಿಗಳ ಆದೇಶ ಗಾಳಿಗೆ ತೂರಿ ಅಕ್ರಮವಾಗಿ ಕೆಂಪು ಮಣ್ಣು ತುಂಬಿಸಿ ಭೂ ಮಾಫಿಯಾ ಮಾಡಲು ಹೊರಟಿದೆ ಎನ್ನಲಾಗುತ್ತಿದೆ.

ಅಧಿಕಾರಿಗಳು ಈ ಪ್ರಕರಣದ ಬಗ್ಗೆ ಯಾವ ನಡೆ ಇಡುತ್ತಾರೆ ಎನ್ನುವುದೇ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ,

ತಕ್ಷಣ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಇತ್ತ ಕಡೆ ಗಮನಹರಿಸಬೇಕೆಂಬುದು ಸಾರ್ವಜನಿಕರು ಹಾಗೂ ಪ್ರವಾಸಿಗರ ಅಭಿಪ್ರಾಯವಾಗಿದೆ

ಅಕ್ರಮವಾಗಿ ಕೆಂಪು ಮಣ್ಣು ತುಂಬಿಸಲು ಯಾರ ಕೈವಾಡವಿದೆ ಎಂದು ತಿಳಿದು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಮಾಹಿತಿ ಸಾರ್ವಜನಿಕ ವಲಯದಲ್ಲಿ ಗುಸು ಗುಸು ಸುದ್ದಿಯಾಗುತ್ತಿದೆ.