ಉಡುಪಿ : ತುಳುನಾಡ ಜವನೆರ್ ಉಡುಪಿ ಅರ್ಪಿಸುವ ಚಾಪರ್ಕ ಕಲಾವಿದರಿಂದ 30 ವರ್ಷಗಳ ನಂತರ ಹೆಸರಾಂತ ಹಾಸ್ಯ ದಿಗ್ಗಜರೊಂದಿಗೆ ತುಳು ಹಾಸ್ಯಮಯ ನಾಟಕ ‘ಯಾನೊರಿ ಬರೊಲಿಯಾ’ ಮತ್ತೊಮ್ಮೆ ಕೃಷ್ಣ ನಗರಿ ಉಡುಪಿಯಲ್ಲಿ ಪ್ರದರ್ಶನ ಗೊಳ್ಳಲಿದೆ.
ಹೌದು, ರಂಗಭೂಮಿಯಲ್ಲಿ ಇತಿಹಾಸ ಸೃಷ್ಟಿಸಿ ದಾಖಲೆ ಪ್ರದರ್ಶನ ಕಂಡಿರುವ ಸೂಪರ್‌ಹಿಟ್ ತುಳು ಹಾಸ್ಯಮಯ ನಾಟಕ ‘ಯಾನೊರಿ ಬರೊಲಿಯಾ’ ಪ್ರಥಮ ಪ್ರದರ್ಶನ ಫೆ.12 ಸಾಯಂಕಾಲ 5.30ಕ್ಕೆ ಉಡುಪಿಯ ಅಜ್ಜರಕಾಡು ಭುಜಂಗ ಪಾರ್ಕ್ ವೇದಿಕೆಯಲ್ಲಿ ನಡೆಯಲಿದೆ.
ಖ್ಯಾತ ಕಲಾವಿದರಾದ ನವೀನ್ ಡಿ. ಪಡೀಲ್, ದೇವದಾಸ್ ಕಾಪಿಕಾಡ್, ಬೋಜರಾಜ್ ವಾಮಂಜೂರು ಹಾಗೂ ಸಾಯಿಕೃಷ್ಣ ಅವರು ಅಭಿನಯಿಸಲಿದ್ದಾರೆ.
ನಾಟಕದ ಕಥೆ, ಸಂಭಾಷಣೆ ಹಾಗೂ ನಿರ್ದೇಶನವನ್ನು ಡಾ. ದೇವದಾಸ್ ಕಾಪಿಕಾಡ್ ಅವರು ನಿರ್ವಹಿಸಿದ್ದಾರೆ. ರಂಗಪ್ರೇಮಿಗಳಿಗೆ ಮನರಂಜನೆ ನೀಡುವ ಭರವಸೆಯೊಂದಿಗೆ ಈ ಪ್ರದರ್ಶನ ಉಡುಪಿ ಶ್ರೀ ಕೃಷ್ಣ ನಗರಿಯಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ.
ಟಿಕೆಟ್ ದರಗಳು : ರೂ. 1,000/- ರೂ. 500/- ರೂ.200/- ರೂ. 100 /-
ಮುಂಗಡ ಟಿಕೆಟ್ ಲಭ್ಯತೆ: ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಲಭ್ಯ ಪೆ.11 ಹಾಗೂ 12 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅಜ್ಜರಕಾಡು ಭುಜಂಗ ಪಾರ್ಕ್ ನಲ್ಲಿ ಲಭ್ಯವಿದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಾಟಕವನ್ನು ವೀಕ್ಷಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



