Home Crime ಸಿಲಾಸ್ ಶಾಲೆಯಲ್ಲಿ ವಿದ್ಯಾರ್ಥಿ ಮೇಲೆ ದೌರ್ಜನ್ಯ : ಪ್ರಾಂಶುಪಾಲರ ವಿರುದ್ಧ ದೂರು…!!

ಸಿಲಾಸ್ ಶಾಲೆಯಲ್ಲಿ ವಿದ್ಯಾರ್ಥಿ ಮೇಲೆ ದೌರ್ಜನ್ಯ : ಪ್ರಾಂಶುಪಾಲರ ವಿರುದ್ಧ ದೂರು…!!

ಉಡುಪಿ : ವಿದ್ಯಾರ್ಥಿಯೊಬ್ಬನನ್ನು ಮೂರು ತಾಸು ತರಗತಿಯ ಹೊರಗಡೆ ನಿಲ್ಲಿಸಿ ನೀರು ಕೊಡದೆ ಮಾನಸಿಕ ಹಿಂಸೆ ನೀಡಿರುವ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿಯ ನಿಟ್ಟೂರಿನ ಸಿಲಾಸ್ ಪದವಿ ಪೂರ್ವ ಕಾಲೇಜಿನಲ್ಲಿ ನ.3ರಂದು ಬೆಳಗ್ಗೆ 17ರ ಹರೆಯದ ನೊಂದ ವಿದ್ಯಾರ್ಥಿ ತರಗತಿಯಲ್ಲಿ ಇರುವಾಗ ಯಾರೋ ವಿದ್ಯಾರ್ಥಿಗಳು ಸಿಡಿಮದ್ದನ್ನು ಸಿಡಿಸಿದ್ದರೆನ್ನಲಾಗಿದೆ. ತರಗತಿಯಲ್ಲಿ ಸಿಡಿಮದ್ದನ್ನು ಸಿಡಿಸಿದ್ದ ವಿದ್ಯಾರ್ಥಿಗಳು ಅವರ ತಪ್ಪನ್ನು ಕಾಲೇಜಿನ ಪ್ರಾಂಶುಪಾಲರ ಮುಂದೆ ಒಪ್ಪಿಕೊಂಡಿದ್ದರು.

ಆದರೂ ಕೂಡ ಪ್ರಾಂಶುಪಾಲರು ಯಾವುದೇ ತಪ್ಪನ್ನು ಮಾಡದ ನೊಂದ ವಿದ್ಯಾರ್ಥಿಯನ್ನು ತರಗತಿಯ ಹೊರಗಡೆ ಸುಮಾರು 3 ತಾಸು ನಿಲ್ಲಿಸಿ ನೀರು ಕೊಡದೆ ದಂಡಿಸಿದ್ದಾರೆ. ಈ ಘಟನೆಯಿಂದ ವಿದ್ಯಾರ್ಥಿ ಮಾನಸಿಕವಾಗಿ ನೊಂದು ಕಾಲೇಜಿಗೆ ಭಯಭೀತನಾಗಿ ಹೋಗುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.