Home Crime ಸಣ್ಣ ಜಗಳ ಕೊಲೆಯಲ್ಲಿ ಅಂತ್ಯ : ಅಣ್ಣನಿಂದಲೇ ತಮ್ಮನ ಹತ್ಯೆ…!!

ಸಣ್ಣ ಜಗಳ ಕೊಲೆಯಲ್ಲಿ ಅಂತ್ಯ : ಅಣ್ಣನಿಂದಲೇ ತಮ್ಮನ ಹತ್ಯೆ…!!

ಸುರತ್ಕಲ್: ಮಂಗಳೂರು ನಗರದ ಸುರತ್ಕಲ್ ಸಮೀಪ ಅಣ್ಣ-ತಮ್ಮಂದಿರ ನಡುವಿನ ಸಣ್ಣ ಜಗಳವೊಂದು ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಉಡುಪಿ ಚೊಕ್ಕಬೆಟ್ಟು ಮಠದ ಬಳಿ ನಡೆದಿದೆ.

ಚೊಕ್ಕಬೆಟ್ಟು ಮಠದ ಬಳಿ ಯಾವುದೋ ವಿಚಾರಕ್ಕೆ ಇಬ್ಬರು ಸಹೋದರರ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತು ಮೀರಿ ಜಗಳಕ್ಕೆ ತಿರುಗಿದಾಗ ಆಕ್ರೋಶಗೊಂಡ ಅಣ್ಣ ಕೈಗೆ ಸಿಕ್ಕ ಕಲ್ಲಿನಿಂದ ತಮ್ಮನ ತಲೆಗೆ ಬಲವಾಗಿ ಹೊಡೆದಿದ್ದಾನೆ.

ಕೊಲೆಯಾದ ತಮ್ಮ ಮಲ್ಲಿಕಾರ್ಜುನ ಎಂದು ತಿಳಿಯಲಾಗಿದೆ. ತಮ್ಮನನ್ನು ಹತ್ಯೆ ಮಾಡಿದ ಅಣ್ಣ ಸೋಮನಾಥ ಎಂದು ಗುರುತಿಸಲಾಗಿದೆ.

ತೀವ್ರ ತಲೆಗೆ ಪೆಟ್ಟಾದ ತಮ್ಮ ಸ್ಥಳದಲ್ಲೇ ರಕ್ತಸ್ರಾವವಾಗಿ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾರೆ.

ಘಟನೆಯ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಉಡುಪಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಆರೋಪಿ ಅಣ್ಣನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆನಡೆಸುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಕ್ತ ಸಂಬಂಧದಲ್ಲೇ ಇಂತಹ ಕೃತ್ಯ ನಡೆದಿರುವುದಕ್ಕೆ ಸುತ್ತಮುತ್ತಲಿನ ಜನರು ಆಘಾತ ವ್ಯಕ್ತಪಡಿಸಿದ್ದಾರೆ. ಕ್ಷಣಿಕ ಕೋಪದಿಂದ ಒಂದು ಜೀವ ಹೋದರೆ, ಇನ್ನೊಂದು ಜೀವ ಜೈಲಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.