Home Crime ನಂದಿಕೂರು: ನಿಂತಿದ್ದ ಲಾರಿಗೆ ಬೈಕ್ ಢಿಕ್ಕಿ : ಯುವಕ ಮೃತ್ಯು…!!

ನಂದಿಕೂರು: ನಿಂತಿದ್ದ ಲಾರಿಗೆ ಬೈಕ್ ಢಿಕ್ಕಿ : ಯುವಕ ಮೃತ್ಯು…!!

ಪಡುಬಿದ್ರಿ: ನಂದಿಕೂರಿನ ಕಾರ್ಕಳ ಪಡುಬಿದ್ರಿ ಬಸ್ ನಿಲ್ದಾಣದ ಬಳಿ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ನಿಲ್ಲಿಸಿದ್ದ ಲಾರಿಯೊಂದರ ಹಿಂಬದಿಗೆ ಕಾರ್ಕಳ ಕಡೆಯಿಂದ ಸುರತ್ಕಲ್‌ನತ್ತ ಹೋಗುತ್ತಿದ್ದ ಸ್ಕೂಟರೊಂದು ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಮಂಜುನಾಥ ಬೈಲಪ್ಪ ಮುರಗಾಲಿ (21) ಎಂಬವರು ತೀವ್ರಗಾಯಗಳೊಂದಿಗೆ ಆಸ್ಪತ್ರೆಗೆ ಕೊಂಡೊಯ್ಯುವಾಗಲೇ ದಾರಿಮಧ್ಯೆ ಮೃತಪಟ್ಟಿದ್ದಾರೆ.

ರಾತ್ರಿಯ ವೇಳೆ ಯಾವುದೇ ಪಾರ್ಕಿಂಗ್ ಲೈಟ್, ಇಂಡಿಕೇಟರ್ ಆಗಲಿ ಹಾಕದೆ ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲದೆ ಲಾರಿ ಹೆದ್ದಾರಿಯಲ್ಲಿ ನಿಂತಿತ್ತು. ಮೃತ ಮಂಜುನಾಥ ಅವರು ರಾಯದುರ್ಗ ಮೂಲದವರಾಗಿದ್ದು ಸುರತ್ಕಲ್ ಕೋಡಿಕರೆ ಪರಿಸರದ ನಿವಾಸಿಯಾಗಿದ್ದರು.

ಖಾಸಗಿ ಉದ್ಯೋಗಿಯಾಗಿದ್ದು 1 ವರ್ಷದ ಹಿಂದೆ ಮದುವೆ ನಿಶ್ಚಯವಾಗಿ ನವೆಂಬರ್‌ನಲ್ಲಿ ವಿವಾಹ ನೆರವೇರಲಿತ್ತೆಂದು ಪೊಲೀಸ್ ಮೂಲಗಳು ತಿಳಿಸಿವೆ.