ಬಂಟ್ವಾಳ : ಬಿ.ಸಿ ರೋಡಿನ ಹೃದಯಭಾಗದಲ್ಲಿರುವ ಹಾರ್ಡ್ ವೇರ್ ಅಂಗಡಿಯೊಂದರ ಬೀಗ ಮುರಿದು ಒಳಗೆ ನುಗ್ಗಿದ ಕಳ್ಳರು ಡ್ರಾಯರ್‌ನಲ್ಲಿರಿಸಿದ್ದ ಸಾವಿರಾರು ರೂಪಾಯಿ ಹಾಗೂ ಸಾಮಾಗ್ರಿಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.
ಬಿಸಿರೋಡಿನ ಕೃಷ್ಣಾ ಕಾಂಪ್ಲೆಕ್ಸ್ ನಲ್ಲಿರುವ ರಾಮ್ ದೇವ್ ಹಾರ್ಡ್ ವೇರ್ ಅಂಗಡಿಯಲ್ಲಿ ಕಳವು ನಡೆದಿದ್ದು ಅಂಗಡಿ ಶಟರ್ ನ ಬೀಗವನ್ನು ಮುರಿದು ಒಳಗೆ ನುಗ್ಗಿ ಅಂಗಡಿಯ ಡ್ರಾಯರ್ ನಲ್ಲಿರಿಸಿದ್ದ ನಗದು ಹಾಗೂ ಹೊಸದಾಗಿ ಖರೀದಿಸಿ ಮಾರಾಟಕ್ಕೆಂದು ತಂದಿದ್ದ ನೀರಿನ ಪೈಪಿನ ಸಾಮಗ್ರಿಗಳು, ಬಾಗಿಲಿನ ಹಿತ್ತಾಳೆಯ ಸಾಮಗ್ರಿಗಳು ಮತ್ತು ಬಾತ್ ರೂಮ್‌ನ ಸಾಮಗ್ರಿಗಳು ಇರುವ ಹೊಸದಾದ ಬಾಕ್ಸ್ಗಳು ಸೇರಿ ಒಟ್ಟು 85,073 ರೂ. ಮೌಲ್ಯದ ಸೊತ್ತುಗಳು ಕಳ್ಳತನವಾಗಿರುತ್ತದೆ ಎಂದು ಅಂಗಡಿಯ ಮ್ಯಾನೇಜರ್ ಜೀತೇಂದ್ರಕುಮಾರ್ ರವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.



