Home Crime ಮಲ್ಪೆ :‌ ವ್ಯಕ್ತಿಯೋರ್ವರು ಸ್ವರ್ಣ ನದಿಗೆ ಹಾರಿ ಆತ್ಮಹತ್ಯೆ….!!

ಮಲ್ಪೆ :‌ ವ್ಯಕ್ತಿಯೋರ್ವರು ಸ್ವರ್ಣ ನದಿಗೆ ಹಾರಿ ಆತ್ಮಹತ್ಯೆ….!!

ಮಲ್ಪೆ: ಉಡುಪಿ ಜಿಲ್ಲೆಯ ಕಲ್ಯಾಣಪುರದ ಸ್ವರ್ಣ ನದಿಗೆ ವ್ಯಕ್ತಿಯೋರ್ವರು ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದವರು ಅರುಣ ಪ್ರಭು ಎಂದು ತಿಳಿದು ಬಂದಿದೆ.

ಮಲ್ಪೆ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ: ಪಿರ್ಯಾದಿದಾರ ಛಾಯಾ ಕಾಮತ್, ಪ್ರಾಯ: 32 ವರ್ಷ ಗಂಡ:ವರುಣ ನರಸಿಂಹ ಕಾಮತ್ ವಾಸ: 11-1-26 ಬಿ,ಅನುರಾಧಾ.ಸರಕಾರಿ ಜೂನಿಯರ್‌ ಕಾಲೇಜ್ ಹಿಂಬಾಗ ಶಿರಬೀಡು ಗ್ರಾಮ, ಇವರ ತಂದೆ ಅರುಣ ಪ್ರಭು ಪ್ರಾಯ: 67 ವರ್ಷ ಇವರು ಹೂವಿನ ವ್ಯಾಪಾರ ಕೆಲಸ ಮಾಡಿಕೊಂಡಿದ್ದು. ಸುಮಾರು 20 ವರ್ಷದಿಂದ ಅಸ್ತಮಾ ಖಾಯಿಲೆ ಇದ್ದು.ಅದಕ್ಕೆ ಸಂಬಂದಿಸಿದಂತೆ ಔಷದಿ ಸೇವಿಸುತ್ತಿದ್ದರು ಹಾಗೂ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೆ ಸುಮಾರು 4 ದಿನಗಳಿಂದ ರಕ್ತ ವಾಂತಿ ಮಾಡಿಕೊಂಡಿದ್ದು, ಇದರಿಂದ ಮಾನಸಿಕವಾಗಿ ಕುಗ್ಗಿದ್ದರು. ಪಿರ್ಯಾದಿದಾರರ ತಂದೆ ತಮಗಿದ್ದ ಖಾಯಿಲೆಯಿಂದ ಮನನೊಂದು ಅಥವಾ ಇನ್ನಾವೂದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ; 28-11-2025 ರಂದು ಬೆಳಿಗ್ಗೆ 05:30 ಗಂಟೆಯಿಂದ 08:00 ಗಂಟೆಯ ಮದ್ಯಾವದಿಯಲ್ಲಿ ಕಲ್ಯಾಣಪುರದ ಸ್ವರ್ಣ ನದಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿರುವುದಾಗಿದೆ.

ಈ ಬಗ್ಗೆ ಮಲ್ಪೆ ಠಾಣಾ ಯು.ಡಿ.ಆರ್ ಕ್ರಮಾಂಕ: 90/2025 ಕಲಂ:194 BNSS ರಂತೆ ಪ್ರಕರಣ ದಅಖಲಿಸಲಾಗಿದೆ.