Home Crime ಅನೈತಿಕ ಸಂಬಂಧದ ಶಂಕೆ : ಹಾಡುಹಗಲೇ ಮಹಿಳೆಯ ಬರ್ಬರ ಕೊಲೆ…!!

ಅನೈತಿಕ ಸಂಬಂಧದ ಶಂಕೆ : ಹಾಡುಹಗಲೇ ಮಹಿಳೆಯ ಬರ್ಬರ ಕೊಲೆ…!!

ಕಲಬುರಗಿ : ಅನೈತಿಕ ಸಂಬಂಧದ ಶಂಕೆಯ ಹಿನ್ನೆಲೆ, ಓರ್ವ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಗಳವಾರ ಬೆಳ್ಳಂಬೆಳಿಗ್ಗೆ ನಗರದ ಶಹಬಜಾರ್ ಬಳಿ ನಡೆದಿದೆ.

ರೂಪಾ (೩೨) ಬರ್ಬರವಾಗಿ ಕೊಲೆಯಾದ ಮಹಿಳೆಯಾಗಿದ್ದು, ಮೃತ ಮಹಿಳೆ ಕಲಬುರಗಿ ತಾಲೂಕಿನ ಕಲ್ಲಹಂಗರಗಾ ಗ್ರಾಮದ ನಿವಾಸಿಯಾಗಿದ್ದು,ಸಮೋಸಾ ಮಾಡಲು ಹೋಟೆಲ್,ಗೆ ತೆರಳುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಮಹಿಳೆಯ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಹತ್ಯೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಎಸಿಪಿ ಚಂದ್ರಶೇಖರ ಸೇರಿದಂತೆ ಹಿರಿಯ ಪೋಲಿಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಲಬುರಗಿ ಚೌಕ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.