ಕೊಲ್ಲೂರು: ಇಡೂರು ಕುಂಜ್ಞಾಡಿಯ ಜನ್ನಾಲ ಬಳಿಯ ಇಂಬು ಎಂಬಲ್ಲಿನ ನಿವಾಸಿ ಶ್ರುತಿ ಅವರ ಪಟ್ಟಾಜಾಗಕ್ಕೆ ಅಕ್ರಮ ಪ್ರವೇಶ ಮಾಡಿದ ಅವರ ಸಂಬಂಧಿಕರಾದ ಸುಬ್ರಹ್ಮಣ್ಯ, ಸಂಧ್ಯಾ ಹಾಗು ನಾಗರತ್ನ ಅವರು ತೋಟದಲ್ಲಿದ್ದ ಅಡಿಕೆ ಹಾಗು ಇತರ ಗಿಡಗಳನ್ನು ಕಿತ್ತು ಎರಡು ಸಾವಿರ ರೂ. ನಷ್ಟ ಉಂಟು ಮಾಡಿದ್ದಾರೆ.
ಅಕ್ರಮ ಪ್ರವೇಶವನ್ನು ಆಕ್ಷೇಪಿಸಿದಾಗ ಆರೋಪಿ ಸುಬ್ರಹ್ಮಣ್ಯ ಬೆದರಿಕೆ ಹಾಕಿ ನಿಂದಿಸಿರುವುದಾಗಿ ಕೊಲ್ಲೂರು ಠಾಣೆಗೆ ದೂರು ನೀಡಲಾಗಿದೆ.




