ಮಲ್ಪೆ : ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಜೂ. 24ರಂದು ಅಸ್ವಸ್ಥರಾಗಿ ಬಿದ್ದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಉ. ಕನ್ನಡ ಜಿಲ್ಲೆಯ ಚಂದ್ರ ಮೊಗೇರ (65) ಅವರು ಜು. 14ರಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸುಮಾರು 30 ವರ್ಷಗಳ ಹಿಂದೆ ದಾಂಪತ್ಯದಲ್ಲಿ ವೈಮನಸ್ಸು ಉಂಟಾದ ಕಾರಣ ಪತ್ನಿ ಮಕ್ಕಳ ತೊರೆದು ಮನೆ ಬಿಟ್ಟು ಬಂದಿದ್ದರು ಎನ್ನಲಾಗಿದೆ.
ಅವರು ಸಾವನ್ನಪ್ಪಿರುವ ಬಗ್ಗೆ ಉಡುಪಿ ನಗರ ಠಾಣಾ ಪೊಲೀಸರು ಚಂದ್ರ ಮೊಗೇರರ ಪತ್ನಿಗೆ ಮಾಹಿತಿ ನೀಡಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




