Home Crime ಪಿಕಪ್ ವಾಹನ ಅಪಘಾತ : ವ್ಯಕ್ತಿಯೊಬ್ಬರು ಮೃತ್ಯು…!!

ಪಿಕಪ್ ವಾಹನ ಅಪಘಾತ : ವ್ಯಕ್ತಿಯೊಬ್ಬರು ಮೃತ್ಯು…!!

ಹೆಬ್ರಿ: ಉಡುಪಿ ಜಿಲ್ಲೆಯ ಹೆಬ್ರಿ‌ ಸಮೀಪ ಪಿಕಪ್ ವಾಹನವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಸಂಭವಿಸಿದೆ.

ಮೃತಪಟ್ಟವರು ಹೆಬ್ರಿ ನಿವಾಸಿ ಸೀತಾರಾಮ ಎಂದು ತಿಳಿದು ಬಂದಿದೆ.

ಅಪಘಾತದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಕರಣದ ಸಾರಾಂಶ : ಪಿರ್ಯಾದಿದಾರರಾದ ಸುರೇಂದ್ರ (34), ಮಕ್ಕಿಚಾರ ಗ್ರಾಮ ಹೆಬ್ರಿ ಇವರು ಹೆಬ್ರಿಯ ಲಯನ್ಸ್‌ ಸರ್ಕಲ್‌ ಬಳಿ ರಿಕ್ಷಾ ಬಾಡಿಗೆ ಮಾಡಿಕೊಂಡಿದ್ದು ದಿನಾಂಕ 19/06/2025 ರಂದು ಬೆಳಿಗ್ಗೆ ಚಾರ ನ್ಯಾಯ ಬೆಲೆ ಅಂಗಡಿ ಬಳಿ ಬಾಡಿಗೆ ಹೋಗಿದ್ದಾಗ ಬೆಳಿಗ್ಗೆ 10:50 ಗಂಟೆಗೆ ಬೆಳಂಜೆ ಕಡೆಯಿಂದ KA-20-AB-7311 ನೇ ಪಿಕಪ್‌ ವಾಹನ ಚಾಲಕ ಜಗದೀಶ ಪಿಕಪ್‌ ವಾಹನವನ್ನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆ ತೀರಾ ಎಡ ಭಾಗಕ್ಕೆ ಚಲಾಯಿಸಿಕೊಂಡು ಬಂದು ರಸ್ತೆಯ ಎಡ ಬದಿಯಲ್ಲಿ ಪಿರ್ಯಾದಿದಾರರ ಪರಿಚಯದ ಸೀತಾರಾಮ ರವರು ಹೆಬ್ರಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-EC-7178 ಟಿ,ವಿ ಎಸ್‌ ಎಕ್ಸಲ್‌ ದ್ವೀಚಕ್ರ ವಾಹನಕ್ಕೆ ಪಿಕಪ್‌ ವಾಹನದ ಹಿಂಭಾಗ ಡಿಕ್ಕಿ ಹೊಡೆದು ಸೀತಾರಾಮ ರವರು ವಾಹನ ಸಮೇತ ರಸ್ತಗೆ ಬಿದ್ದು ಅವರ ತಲೆಯ ಹಿಂಭಾಗ ಬಲ ಭುಜ , ಬಲಕೈ ಹಾಗೂ ಬಲಕಾಲು ರಕ್ತಗಾಯವಾಗಿದ್ದು ನಂತರ ಕೂಡಲೇ ಪಿರ್ಯಾದಿದಾರರು ಹಾಗೂ ಅಲ್ಲಿ ಸೇರಿದವರು ಸೀತಾರಾಮ ರವರನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಪರಿಕ್ಷಿಸಿದ ವೈದ್ಯರು ಸೀತಾರಾಮ ರವರು ಮೃತಪಟ್ಟಿರುವುದಾಗಿ ಬೆಳಿಗ್ಗೆ 11:15 ಗಂಟೆಗೆ ತಿಳಿಸಿರುತ್ತಾರೆ .

ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 41/2025 ಕಲಂ:281, 106 BNS ರಂತೆ ಪ್ರಕರಣ ದಾಖಲಾಗಿರುತ್ತದೆ.