Home Crime ಅಕ್ರಮವಾಗಿ ಕೆಂಪುಕಲ್ಲು ಸಾಗಾಟ : ಲಾರಿ ಪೊಲೀಸ್ ವಶಕ್ಕೆ…!!

ಅಕ್ರಮವಾಗಿ ಕೆಂಪುಕಲ್ಲು ಸಾಗಾಟ : ಲಾರಿ ಪೊಲೀಸ್ ವಶಕ್ಕೆ…!!

ಬಂಟ್ವಾಳ: ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಅಕ್ರಮವಾಗಿ ಲಾರಿಯಲ್ಲಿ ಕೆಂಪುಕಲ್ಲು ಸಾಗಾಟ ನಡೆಸುತ್ತಿರುವುದನ್ನು ಪತ್ತೆ ಹಚ್ಚಿ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಟ್ವಾಳ, ಕೊಳ್ನಾಡು ಗ್ರಾಮದ ಕೂಡ್ತಮುಗೇರು ಎಂಬಲ್ಲಿ, ವಿಟ್ಲ ಪೊಲೀಸ್ ಠಾಣೆಯ ರತ್ನಕುಮಾರ್ ಪೊಲೀಸ್ ಉಪ ನಿರೀಕ್ಷಕರು, (ತನಿಖೆ-01) ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ಮಾಡುವ ವೇಳೆ, ಬೋಳ್ಪದೆ ಕಡೆಯಿಂದ ಕೂಡ್ತಮುಗೇರು ಕಡೆಗೆ ಬರುತ್ತಿದ್ದ KA-12-A-9095 ನೋಂದಣಿಯ ಲಾರಿಯನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ, ಲಾರಿಯಲ್ಲಿ ಕೆಂಪು ಕಲ್ಲು ತುಂಬಿಸಿಕೊಂಡು ಸಾಗಿಸುತ್ತಿರುವುದು ಕಂಡುಬಂದಿದೆ.

ತಕ್ಷಣ ಕಲ್ಲುಗಳ ಸಾಗಾಟದ ಬಗ್ಗೆ ಲಾರಿ ಚಾಲಕ ಎನ್.ಸಿ.ಶರೀಪ್ (42) ಎಂಬಾತನಲ್ಲಿ ವಿಚಾರಿಸಿದಾಗ, ಯಾವುದೇ ಪರವಾನಿಗೆ ಅಥವಾ ದಾಖಲಾತಿ ಇಲ್ಲದೆ, ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಕಳ್ಳತನದಿಂದ ತುಂಬಿಸಿಕೊಂಡು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಮುಂದಿನ ಕಾನೂನು ಕ್ರಮಕ್ಕಾಗಿ ಲಾರಿ ಚಾಲಕನನ್ನು ಹಾಗೂ ಲಾರಿಯನ್ನು ಲೋಡ್ ಸಮೇತ ವಶಕ್ಕೆ ಪಡೆದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.