ಕೋಟ: ಉಡುಪಿ ಜಿಲ್ಲೆಯ ಕೋಟ ಸಮೀಪ ವ್ಯಕ್ತಿಯೋರ್ವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸಾವನ್ನಪ್ಪಿದವರು ರಾಘವೇಂದ್ರ ಎಂದು ತಿಳಿಯಲಾಗಿದೆ.
ರಾಘವೇಂದ್ರ ಅವರ ಸಾವಿನ ಬಗ್ಗೆ ಅವರ ಅಣ್ಣ ರವೀಂದ್ರ ಕುಮಾರ್ ಸಂಶಯ ವ್ಯಕ್ತಪಡಿಸಿ ಕೋಟ ಪೊಲೀಸರಿಗೆ ತನಿಖೆ ಮಾಡುವಂತೆ ದೂರು ನೀಡಿದ್ದಾರೆ.
ಪ್ರಕರಣದ ವಿವರ : ಪಿರ್ಯಾದಿದಾರರಾದ ರವೀಂದ್ರ ಕುಮಾರ್ (40),ಮುದೂರು ಗ್ರಾಮ ಬೈಂದೂರು ಇವರ ತಮ್ಮ ರಾಘವೇಂದ್ರ (32) ರವರು ಅವರ ಹೆಂಡತಿ ಮನೆಯಾದ ಆವರ್ಸೆ ಯಲ್ಲಿ ಸುಮಾರು 12 ವರ್ಷಗಳಿಂದ ಅವರ ಹೆಂಡತಿ ಮಾಲತಿ ರವರ ತಂದೆ ರಾಮ ಬೆಳಾರೆ ರವರ ಮನೆಯಲ್ಲಿ ವಾಸವಿರುತ್ತಾರೆ. ಅವರು ಕೂಲಿ ಕೆಲಸ ಮಾಡಿಕೊಂಡಿದ್ದು ಕುಡಿತದ ಚಟವನ್ನು ಹೊಂದಿರುತ್ತಾರೆ .ಈ ಹಿಂದೆ ರಾಘವೇಂದ್ರನು ಕುಡಿದು ಬಂದು ಗಲಾಟೆ ಮಾಡಿದ ಬಗ್ಗೆ ಠಾಣೆಯಲ್ಲಿ ಆತನ ಹೆಂಡತಿ ದೂರು ದಾಖಲಿಸಿದ್ದು ಅವನಿಗೆ ಬುದ್ದಿಮಾತು ಹೇಳಿ ಕಳುಹಿಸಿರುತ್ತಾರೆ .ರಾಘವೇಂದ್ರ ರವರಿಗೆ 7 ವರ್ಷಗಳ ಹಿಂದೆ ಹೊಟ್ಟೆ ನೋವು ಎಂದು ಹೇಳಿ ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು ದಿನಾಂಕ 10/09/2025 ರಂದು ಸಂಜೆ 4:00 ಗಂಟೆ ಸುಮಾರಿಗೆ ಆವರ್ಸೆ ಹೆಂಡತಿ ಮನೆಯಲ್ಲಿ ನೇಣು ಹಾಕಿಕೊಂಡಿರುವುದಾಗಿ ಮೃತರ ಹೆಂಡತಿಯ ಅಕ್ಕ ಶರಾವತಿ ಎಂಬುವವರು ಕರೆಮಾಡಿ ತಿಳಿಸಿರುತ್ತಾರೆ.
ಮೃತ ಶರೀರ ವನ್ನು ಯಾವುದೇ ಮಾಹಿತಿ ನೀಡದೇ ಏಕಾಏಕಿ ಇಳಿಸಿ ಆವರ್ಸೆ ಪಿ ಹೆಚ್ ಸಿ ಗೆ ಕರೆದುಕೊಂಡು ಹೋಗಿರುವುದಾಗಿದೆ ಆದ್ದರಿಂದ ರಾಘವೇಂದ್ರ ರವರ ಸಾವಿನ ಮೇಲೆ ಸಂಶಯವಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 50/2025 ಕಲಂ:194(3) BNSS ರಂತೆ ಪ್ರಕರಣ ದಾಖಲಾಗಿರುತ್ತದೆ.