ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಮಾಳದ ಗ್ರಾಮದ ವ್ಯಕ್ತಿಯೊಬ್ಬರಿಗೆ ನೆರೆಮನೆಯ ಯುವಕನೋರ್ವ ಜಾಗದ ವಿಚಾರದಲ್ಲಿ ಕತ್ತಿಯಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ.
ಆರೋಪಿ ಗಣೇಶ್ ಎಂಬವ ಅನಿಲ್ ಎಂಬವರಿಗೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ಪಿರ್ಯಾದಿದಾರರಾದ ಅನಿಲ್ ಮಸ್ಕರೇನ್ಹಸ್ (53),ಮಿಯಾರು ಗ್ರಾಮ, ಕಾರ್ಕಳ ಇವರು ಮಾಳ ಗ್ರಾಮದ ಹುಕ್ರಟ್ಟೆ ಎಂಬಲ್ಲಿ ಜಾಗ ಮತ್ತು ಮನೆ ಹೊಂದಿದ್ದು, ಅಲ್ಲಿಗೆ ಹೋಗಿ ಬರುತ್ತಾ ಇರುತ್ತಾರೆ. ಪಿರ್ಯಾದಿದಾರರು ಅಲ್ಲಿಗೆ ಹೋದ ಸಮಯದಲ್ಲಿ ಅಲ್ಲಿ ನೆರೆಮನೆಯ ನಿವಾಸಿಯಾದ ಅಪಾದಿತ ಗಣೇಶ ಎಂಬಾತನು ಇದು ತನ್ನ ಜಾಗ ಎಂದು ಜಗಳ ಮಾಡುತ್ತಿದ್ದನು. ದಿನಾಂಕ 15/07/2026 ರಂದು ಪಿರ್ಯಾದಿದಾರರು ಬೆಳಿಗ್ಗೆ ಜಾಗಕ್ಕೆ ಹೋಗಿ ಕೆಲಸ ಮಾಡಿ ಸಂಜೆ 5:30 ಗಂಟೆಗೆ ಮನೆಯ ಕಂಪೌಂಡ್ ಹತ್ತಿರ ಒಳಗೆ ಹುಲ್ಲು ಮತ್ತು ಕಳೆಗಿಡಗಳನ್ನು ತೆಗೆಯುತ್ತಾ ಇದ್ದಾಗ ಅಪಾದಿತ ಗಣೇಶನು ಬಂದವನು ಈ ಜಾಗ ನನಗೆ ಸೇರಿದ್ದು ಇಲ್ಲಿ ಯಾಕೆ ಕೆಲಸ ಮಾಡುತ್ತೀಯಾ ಎಂದು ಆಕ್ಷೇಪಿಸಿದ್ದು, ಆಗ ಪಿರ್ಯಾದಿದಾರರು ನಾನು ನನ್ನ ಜಾಗದಲ್ಲಿ ಕೆಲಸ ಮಾಡುತ್ತಾ ಇದ್ದೇನೆ ಎಂದು ಹೇಳಿ ಮನೆಯೊಳಗೆ ಹೋಗಿದ್ದು ಆಗ ಅಪಾದಿತನು ಅವಾಚ್ಯ ಶಬ್ದಗಳಿಂದ ಬೈದು ತನ್ನ ಮನೆಗೆ ಹೋಗಿ ಮನೆಯಿಂದ 2 ಕತ್ತಿಗಳನ್ನು ತೆಗೆದುಕೊಂಡು ಬಂದಾಗ ಪಿರ್ಯಾದಿದಾರರು ಹೆದರಿ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂದ್ದು ಅಪಾದಿತನು ಫಿರ್ಯಾದುದಾರರನ್ನುದ್ದೇಶಿಸಿ ಹೊರಗೆ ಬಾ ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳಿ ಮನೆಯ ಸಿಟ್ ಔಟ್‌ಗೆ ಅಕ್ರಮ ಪ್ರವೇಶ ಮಾಡಿ ಮನೆಯ ಬಾಗಿಲಿಗೆ ತುಳಿದಿದ್ದು, ಪಿರ್ಯಾದಿದಾರರು ಮನೆಯ ಹೊರಗೆ ಇಟ್ಟಿದ್ದ ಅವರ KA-20-HJ-9230 ನಂಬ್ರದ ಹೊಸ ಟಿವಿಎಸ್ ಜುಪಿಟರ್ ಸ್ಕೂಟರನ್ನು ಆಪಾದಿತನು ದೂಡಿ ಹಾಕಿದಾಗ ಸ್ಕೂಟರ್ ಹಾಳು ಮಾಡಬೇಡ ಎಂದು ಹೇಳಿ ಹೊರಗೆ ಬಂದಾಗ ಅಪಾದಿತನು ಪಿರ್ಯಾದಿದಾರರನ್ನು ಕೊಲ್ಲುವ ಉದ್ದೇಶದಿಂದ ಕತ್ತಿಯಿಂದ ಕಡಿಯಲು ಬಂದಾಗ ಪಿರ್ಯಾದಿದಾರರು ತಡೆಯಲು ಕೈ ಅಡ್ಡ ಹಿಡಿದಿದ್ದು ಕತ್ತಿಯಿಂದ ಕಡಿದ ಪರಿಣಾಮ ಎಡಕೈಗೆ ತಾಗಿ ಹೆಬ್ಬೆರಳಿಗೆ ರಕ್ತಗಾಯವಾಗಿ ಪಿರ್ಯಾದಿದಾರರು ಕಾರ್ಕಳ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 58/2026 ಕಲಂ: 109 (1), 352, 351(1), 329 (4) BNS ರಂತೆ ಪ್ರಕರಣ ದಾಖಲಾಗಿರುತ್ತದೆ.




