ಉಡುಪಿ : ನಗರದಲ್ಲಿ ಇಂದು ಬೆಳಂ ಬೆಳಿಗ್ಗೆ ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ನೋ ಪಾರ್ಕಿಂಗ್, ನೋ ಎಂಟ್ರಿ, ವಾಹನಗಳಲ್ಲಿ ಜನರ ಸಾಗಾಟ ಮಾಡುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸಿದ್ದಾರೆ.
ಸಿಟಿ ಬಸ್ ಸ್ಟ್ಯಾಂಡ್, ಸರ್ವಿಸ್ ಬಸ್ ಸ್ಟ್ಯಾಂಡ್, ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್, ಬಿದನಗುಡ್ಡೆ ಜಂಕ್ಷನ್, ಕೃಷ್ಣಮಠದ ಸುತ್ತಮುತ್ತ ಪ್ರದೇಶದಲ್ಲಿ ಟ್ರಾಫಿಕ್ ಪೊಲೀಸರು ತಪಾಸಣೆ ನಡೆಸಿ 50 ವಾಹನಗಳ ಮೇಲೆ ಕೇಸ್ ದಾಖಲಿಸಿ,22,500 ನಗದನ್ನು ವಸೂಲಿ ಮಾಡಿದ್ದಾರೆ.
ಟ್ರಾಫಿಕ್ ಪಿಎಸ್ಐ ಮಹೇಶ್ ಮತ್ತು ಅವರ ತಂಡ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ ಎಂದು ತಿಳಿದು ಬಂದಿದೆ.








