Home Uncategorized ಹಿರಿಯಡ್ಕ : ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ : 8 ಮಂದಿಯ ಬಂಧನ…!!

ಹಿರಿಯಡ್ಕ : ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ : 8 ಮಂದಿಯ ಬಂಧನ…!!

ಹಿರಿಯಡ್ಕ: ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪ ಕಲ್ಕುಡ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿರುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, 8 ಮಂದಿಯನ್ನು ಬಂಧಿಸಿದ್ದಾರೆ.

ಪೊಲೀಸರು ಬಂಧಿಸಿದ ಆರೋಪಿಗಳು ಕಡೆಕಾರ್ ಉದಯ‌ ಪೂಜಾರಿ ಯಾನೆ ಕೋರಿ‌ ಉದಯ,ಮಹೇಶ್ ಅಂಬಲಪಾಡಿ, ನಾರಾಯಣ, ಪ್ರವೀಣ, ಸುದೇಶ್ , ಹರೀಶ್ , ಗುರುರಾಜ್ , ದಿನೇಶ್ ಶೆಟ್ಟಿ ಎಂದು ಗುರುತಿಸಲಾಗಿದೆ.

ಪ್ರಕರಣದ ವಿವರ: ದಿನಾಂಕ 13/07/2026 ರಂದು ಸಂಜೆ ಪುನಿತ್‌ ಕುಮಾರ.ಬಿ.ಇ,ಪೊಲೀಸ್‌ ಉಪನಿರೀಕ್ಷಕರು(ಕಾ.ಸು), ಹಿರಿಯಡ್ಕ ಪೊಲೀಸ್ ಠಾಣೆ‌ ಇವರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಬಂದ ಮಾಹಿತಿಯ ಮೇರೆಗೆ ಕಲ್ಕುಡ ದೇವಸ್ಥಾನದ ಬಳಿ ತಲುಪಿ ನೋಡಿದಾಗ ಸಾರ್ವಜನಿಕ ಸ್ಥಳದಲ್ಲಿ ಸುಮಾರು 10 ರಿಂದ 15 ಜನರು ಕೋಳಿಗಳ ಕಾಲಿಗೆ ಹರಿತವಾದ ಬಾಳುಗಳನ್ನು ಕಟ್ಟಿ, ಅವುಗಳನ್ನು ಕಾಳಗಕ್ಕೆ ಬಿಟ್ಟು ಅವುಗಳಿಗೆ ಹಿಂಸೆಯನ್ನು ನೀಡುತ್ತಾ ಕಾಳಗದ ಕೋಳಿಗಳ ಮೇಲೆ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ಆಡುತ್ತಿದ್ದಲ್ಲಿಗೆ ದಾಳಿ ಮಾಡಿದಾಗ ಕೆಲವರು ಓಡಿ ಹೋಗಿರುತ್ತಾರೆ.

KA – 19 M 2700 ಇನೋವಾ ಕಾರು ಹಾಗೂ 8 ಮೋಟಾರ್‌ ಮತ್ತು ನಗದು 36,210/- ರೂಪಾಯಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುತ್ತಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 46/2026 ಕಲಂ :87 KP Act ಮತ್ತು ಕಲಂ:11(1 ) (A) ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ. ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.