ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮವಾರ ಸಮೀಪದ ಯುವತಿಯೋರ್ವಳಿಗೆ ಟೆಲಿಗ್ರಾಂ ಆ್ಯಪ್ ಮೂಲಕ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಘಟನೆ ನಡೆದಿದೆ.
ವಂಚನೆಯಾದ ಯುವತಿ ಶ್ರೇಯಾ ಎಂದು ತಿಳಿದು ಬಂದಿದೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ಬ್ರಹ್ಮಾವರ ಪೊಲೀಸ್ ಠಾಣಾ ಸರಹದ್ದಿನ ವಾರಂಬಳ್ಳಿ ಗ್ರಾಮದ ಉಪ್ಪಿನಕೋಟೆಯ ನಡುಹಿತ್ಲು ಎಂಬಲ್ಲಿ ವಾಸವಾಗಿರುವ ಫಿರ್ಯಾದಿ ಶ್ರೇಯಾ (21) ವಾರಂಬಳ್ಳಿ ಗ್ರಾಮ, ಬ್ರಹ್ಮಾವರ ಇವರಿಗೆ ದಿನಾಂಕ 24.11.2025 ರಂದು ಬೆಳಿಗ್ಗೆ ಸುಮಾರು 10:00 ಗಂಟೆಗೆ ಅವರ Telegram ಖಾತೆಗೆ ಸೈಬರ್ ಅಪರಾಧಿಯು ತನ್ನ 9108303652 ನೇ ನಂಬರ್ ಮೂಲಕ CME Group ಕಳುಹಿಸಿ, ಸದ್ರಿ ಗ್ರೂಪಿನಲ್ಲಿ ಹಣ ಹೂಡಿಕೆ ಮಾಡಿ ಲಾಭ ಮಾಡುವ ಬಗ್ಗೆ ತಿಳಿಸಿ ಫಿರ್ಯಾದಿದಾರಿಂದ ಮೊದಲು ರೂ 2000/- ಪಡೆದು ಅದಕ್ಕೆ ರೂ 2,800/- ಅನ್ನು ಫಿರ್ಯಾದಿದಾರರ ಖಾತೆಗೆ ಕಳುಹಿಸಿ, ಫಿರ್ಯಾದಿದಾರರನ್ನು ನಂಬುವಂತೆ ಮಾಡಿ ನಂತರ ಫಿರ್ಯಾದಿದಾರರ ಕರ್ನಾಟಕ ಬ್ಯಾಂಕ್ ಖಾತೆಯಿಂದ ರೂ 55,000/ ಮತ್ತು ಯೂನಿಯನ್ ಬ್ಯಾಂಕ್ ಶಾಖೆಯ ಖಾತೆಯಿಂದ ರೂ 50,000/- ಹಣವನ್ನು ಸೈಬರ್ ಅಪರಾಧಿಯು ತನ್ನ UPI ನಂಬರಿಗೆ ಫಿರ್ಯಾದಿದಾರಿಂದ ಗೂಗಲ್ ಪೇ ಮೂಲಕ ಒಟ್ಟು ರೂ 1,05,000/- ಹಣವನ್ನು ವರ್ಗಾಯಿಸಿಕೊಂಡು ವಂಚಿಸಿರುತ್ತಾನೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 241/2025 ಕಲಂ: 66(C), 66(D) IT ACT ರಂತೆ ಪ್ರಕರಣ ದಾಖಲಾಗಿರುತ್ತದೆ.



