ಉಡುಪಿ : ಆರ್ ಎಸ್ ಸಾಂಗ್ಸ್ ಪ್ರೋಡಕ್ಷನ್ಸ್ ಹಾಗೂ ಆರ್ಯ ಪ್ರೋಡಕ್ಷನ್ಸ್ ರವರ ಬಹುನಿರೀಕ್ಷಿತ ಕನ್ನಡ ಆಲ್ಬಂ ಹಾಡು ‘ಆರ್ಯ’ ಹಾಡಿನ ಚಿತ್ರೀಕರಣ ಉಡುಪಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯಿತು ಹಾಡಿನ ಮುಹೂರ್ತವನ್ನು ಉಡುಪಿಯ ಇತಿಹಾಸ ಪ್ರಸಿದ್ಧ ಕುಕ್ಕೆ ಹಳ್ಳಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಸಿದ ತಂಡವು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ನಮ್ಮ ಮುಹೂರ್ತವನ್ನು ಬಿರುವೆರ್ ಕುಡ್ಲ ರಿ. ಉಡುಪಿ ಘಟಕದ ಅಧ್ಯಕ್ಷರಾದ ಯೋಗೀಶ್ ಪೂಜಾರಿ ಹಾಗೂ ಖ್ಯಾತ ಉದ್ಯಮಿ ಯಾದ ರಾಜೇಶ್ ಪೂಜಾರಿ ಚಾಲನೆ ನೀಡಿದರು.
ತುಳುನಾಡ ಸಾಹಿತ್ಯ ಜೋಡಿಗಳೆಂದೆ ಖ್ಯಾತರಾಗಿರುವ ರಕ್ಷಿತ್ ಸರಿಪಲ್ಲ ರವರ ನಿರ್ದೇಶನ ಹಾಗೂ ಶ್ರೇಯಸ್ ಯೆಯ್ಯಾಡಿ ಯವರ ಸಾಹಿತ್ಯ ಇರುವಂತಹ ಈ ಹಾಡಿಗೆ ಹಳ್ಳಿ ಹುಡುಗ ಖ್ಯಾತಿಯ ಮಂಜುನಾಥ್ ಚೇರ್ಕಾಡಿಯವರು ನಾಯಕ ನಟರಾಗಿ ಸೋನಿ ಪ್ರಭುದನ್ ನಾಯಕಿ ಯಾಗಿ ಸಹ ಕಲಾವಿದರಾಗಿ ಮೇಘ ಪೂಜಾರಿ, ವಿಶೇಷ ಪಾತ್ರದಲ್ಲಿ ಬಾಲ ನಟಿ ತನಿಷ್ಕಾ ಪೂಜಾರಿ ಅಭಿನಯಿಸುತ್ತಿದ್ದರೆ.
ಇನ್ನುಳಿದಂತೆ ಸಿನಿಮಾಟೋಗ್ರಾಫರ್ ರಾಗಿ ಹಲವಾರು ಚಲನಚಿತ್ರಗಳಲ್ಲಿ ಕೆಲಸ ಮಾಡಿದಂತಹ ಧೀರಜ್ ಭಟ್, ಛಾಯಾಗ್ರಾಹಕರಾಗಿ ರೋಶನ್ ಉಡುಪಿ
ಈ ಹಾಡಿಗೆ ಸುಭಾಷ್ ಮಿಜಾರ್ ಇವರ ಸಂಗೀತವಿದೆ ಆರ್ ಕೆ ಮುಲ್ಕಿ ಅವರ ಗಾಯನು ಈ ಹಾಡಿನಲ್ಲಿ ನಮಗೆ ಕೇಳಬಹುದು.




