Home Crime ಅಕ್ರಮ ಮದ್ಯ ಮಾರಾಟ : ಆರೋಪಿ ಅರೆಸ್ಟ್…!!

ಅಕ್ರಮ ಮದ್ಯ ಮಾರಾಟ : ಆರೋಪಿ ಅರೆಸ್ಟ್…!!

ಕುಂದಾಪುರ : ಉಡುಪಿ ಜಿಲ್ಲೆಯ ‌ಕುಂದಾಪುರ ಸಮೀಪ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಕೂರ್ಗಿ ಗ್ರಾಮದ ಶೇಷಾದ್ರಿ ಎಂದು ತಿಳಿದು ಬಂದಿದೆ.

ಕುಂದಾಪುರ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಪ್ರಕರಣದ ಸಾರಾಂಶ : ದಿನಾಂಕ: 27̤.08̤.2025 ರಂದು ಕುಂದಾಪುರ ತಾಲೂಕು ಹೆಸ್ಕತ್ತೂರು ಗ್ರಾಮದ ಹೆಸ್ಕತ್ತೂರು ಸಾನ್ವಿ ಕೋಳಿ ಫಾರ್ಮ್ ಹಿಂಬದಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿಯ ಮೇರೆಗೆ ಭೀಮಾಶಂಕರ ಸಿನ್ನೂರ ಸಂಗಣ್ಣ, ಪೊಲೀಸ್‌ ಉಪನಿರೀಕ್ಷಕರು, ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಇವರು ಸ್ಥಳಕ್ಕೆ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿಯು 4 ರಟ್ಟಿನ ಬಾಕ್ಸ್ ಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದು, ಆತನ ಹೆಸರು ವಿಳಾಸ ವಿಚಾರಿಸಲಾಗಿ ಶೇಷಾದ್ರಿ(43), ತಂದೆ:ಶಂಕರಪ್ಪ, ವಾಸ:ನೂಜಿ, ಕೊರ್ಗಿ ಗ್ರಾಮ, ಕುಂದಾಪುರ ಎಂದು ತಿಳಿದು, ಆತನ ಬಳಿ ಇದ್ದ 4 ರಟ್ಟಿನ ಬಾಕ್ಸ್‌ಗಳನ್ನು ಪರಿಶೀಲಿಸಲಾಗಿ ತಲಾ ಒಂದೊಂದು ಬಾಕ್ಸ್‌ನಲ್ಲಿ Haywards Cheers Whisky 90 MLನ ಮದ್ಯ ತುಂಬಿದ ಟೆಟ್ರಾ ಪ್ಯಾಕೇಟ್ 72, Original Choice 90 MLನ ಮದ್ಯ ತುಂಬಿದ ಟೆಟ್ರಾ ಪ್ಯಾಕೆಟ್ 96, Original Choice 90 MLನ ಮದ್ಯ ತುಂಬಿದ ಟೆಟ್ರಾ ಪ್ಯಾಕೆಟ್ 21 , Mysore Lancer 90 MLನ ಮದ್ಯ ತುಂಬಿದ ಟೆಟ್ರಾ ಪ್ಯಾಕೆಟ್ 84 ಇರುತ್ತದೆ. ಒಟ್ಟು 273 ಮದ್ಯದ ಟೆಟ್ರಾ ಪ್ಯಾಕೆಟ್ ಗಳು ಇದ್ದು, ಮದ್ಯದ ಪ್ಯಾಕೆಟ್ ನ ತಲಾ ಒಂದರ ಮೌಲ್ಯ 50 ರೂನಂತೆ ಒಟ್ಟು 13,650 ರೂಪಾಯಿ ಆಗಿರುತ್ತದೆ. ಗಣೇಶ ಹಬ್ಬದ ಪ್ರಯುಕ್ತ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ ಇರುವುದಾಗಿ ಮಾನ್ಯ ಜಿಲ್ಲಾಧಿಕಾರಿಯವರ ಆದೇಶವಿದ್ದೂ ಕೂಡ ಆರೋಪಿಯು ಯಾವುದೇ ಪರವಾನಿಗೆ ಇಲ್ಲದೇ ತನ್ನ ಸ್ವಂತ ಲಾಭಕ್ಕಾಗಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿದೆ. ಮದ್ಯದ ಪ್ಯಾಕೇಟ್‌ಗಳನ್ನು, ಹಾಗೂ ಮದ್ಯ ಮಾರಾಟ ಮಾಡಿ ಸಂಗ್ರಹಿಸಿದ ಹಣ 280/- ರೂಪಾಯಿಯನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿದೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ:56/ 2025 ಕಲಂ: 32, 34 K E Act ರಂತೆ ಪ್ರಕರಣ ಕಲಿಸಿಕೊಳ್ಳಲಾಗಿದೆ.