Home Latest ಗ್ಯಾನ್ ಜಿ ಪಾಲನ್ ಕೊಡವೂರು ಇವರಿಗೆ “ಇಸ್ಕಾನ್ ವ್ಯಾಲ್ಯೂ ಎಜುಕೇಶನ್ ” ಪುರಸ್ಕಾರ…!!

ಗ್ಯಾನ್ ಜಿ ಪಾಲನ್ ಕೊಡವೂರು ಇವರಿಗೆ “ಇಸ್ಕಾನ್ ವ್ಯಾಲ್ಯೂ ಎಜುಕೇಶನ್ ” ಪುರಸ್ಕಾರ…!!

ಉಡುಪಿ: ಕೇಂದ್ರೀಯ ವಿದ್ಯಾಲಯದಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿರುವ ಗ್ಯಾನ್ ಜಿ ಪಾಲನ್ ರವರಿಗೆ ಅಪ್ ಗ್ರೇಡ್ ಇಸ್ರೋ ವಿಸಿಟ್ ಮತ್ತು ನ್ಯಾಷನಲ್ ಟಾಪರ್ ಅವಾರ್ಡ್ ಮಂಗಲಯಾನ ರೂವಾರಿ
ಡಾ ಸೋಮನಾಥ್ ರವರು , “ಇಸ್ಕಾನ್ ವ್ಯಾಲ್ಯೂ ಎಜುಕೇಶನ್ “
ಪ್ರಶಸ್ತಿ ಪತ್ರ ಹಾಗೂ ಸೈಕಲ್ ನ್ನು ಬೆಂಗಳೂರು ಶೇಷಾದ್ರಿ ಇಸ್ಕಾನ್ ನಲ್ಲಿ ನೀಡಿ ಪುರಸ್ಕರಿಸಿದರುರು.

ಭಾರತದಾದ್ಯಂತ ಮೂರು ಲಕ್ಷ ಕ್ಕಿಂತಲೂ ಅಧಿಕ ಮಕ್ಕಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ನೂರಿಪ್ಪತ್ತು ಮಕ್ಕಳು ಬೇರೆ ಬೇರೆ ರಾಜ್ಯದಿಂದ ಆಯ್ಕೆ ಆಗಿದ್ದು ಕೊಡವೂರು ಬಾಚನಬೈಲು ನಿವಾಸಿ ಗಣೇಶ್ ಹಾಗೂ ಅಂಬಾ ಜಿ ಪಾಲನ್ ರವರ ಪುತ್ರ ಗ್ಯಾನ್ ಜಿ ಪಾಲನ್ ರವರು ವ್ಯಾಲ್ಯೂ ಎಜುಕೇಶನ್ ನಲ್ಲಿ ಮೊದಲ ರಾಂಕ್ ಪಡೆದಿದ್ದಾರೆ.