Home Latest ಉಡುಪಿ-ಶ್ರೀ ಕೃಷ್ಣ ಮಠದ ಯಾತ್ರಿಕರ ವಾಹನ ನಿಲುಗಡೆ ಸ್ಥಳದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧೆಯ ರಕ್ಷಣೆ..!!

ಉಡುಪಿ-ಶ್ರೀ ಕೃಷ್ಣ ಮಠದ ಯಾತ್ರಿಕರ ವಾಹನ ನಿಲುಗಡೆ ಸ್ಥಳದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧೆಯ ರಕ್ಷಣೆ..!!

ಉಡುಪಿ : ಶ್ರೀಕೃಷ್ಣ ಮಠದ ಯಾತ್ರಿಕರ ವಾಹನ ನಿಲುಗಡೆ, ಸ್ಥಳದಲ್ಲಿ ದಿಕ್ಕುಕಾಣದೆ, ಅಸಹಾಯಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದ, ವೃದ್ಧೆಯ ರಕ್ಷಣಾ ಕಾರ್ಯಚರಣೆ ನಡೆದಿದೆ.

ಕೆಲವು ದಿನಗಳಿಂದ ವೃದ್ಧೆಯು ವಾಹನ ನಿಲುಗಡೆ ಸ್ಥಳದಲ್ಲಿ ನೆಲೆ ಪಡೆದಿರುವುದನ್ನು ಗಮನಿಸಿದ ಸ್ಥಳೀಯ ಸುಬ್ರಹ್ಮಣ್ಯ ಹೆಬ್ಬಾರ್ ಎನ್ನುವರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಗಮನಕ್ಕೆ ತಂದಿದ್ದರು.

ತಕ್ಷಣ ಸ್ಪಂದಿಸಿದ ಒಳಕಾಡುರವರು ಅಕ್ಕ ಪಡೆಯ ನೆರವು ಪಡೆದು, ವೃದ್ಧೆಯನ್ನು ನಿಟ್ಟೂರಿನ ಸಖಿ ಕೇಂದ್ರದಲ್ಲಿ ಪುರ್ನವಸತಿ ಕಲ್ಪಿಸುವ ವ್ಯವಸ್ಥೆಗೊಳಿಸಿದ್ದಾರೆ.

ವೃದ್ಧೆ ತುಮಕೂರಿನ ನಿವಾಸಿ ಪ್ರಫುಲ್ಲಾ ಎಂದಷ್ಟೆ ಹೇಳಿಕೊಂಡಿದ್ದಾರೆ. ವಾರಸುದಾರರು ಉಡುಪಿ ಮಹಿಳಾ ಪೋಲಿಸ್ ಠಾಣೆಯನ್ನು ಅಥವಾ ಸಖಿ ಸೆಂಟರನ್ನು ಸಂಪರ್ಕಿಸಲು ಸೂಚಿಸಲಾಗಿದೆ.