Home Latest ನೀಟ್ ಪಶ್ನೆ ಪತ್ರಿಕೆ ಸೋರಿಕೆ : ತಪ್ಪಿತಸ್ಥರ ವಿರುದ್ಧ ಸಿಬಿಐ ತನಿಖೆ : ನಿರ್ದಿಷ್ಟ ದಿನಾಂಕದಂದು...

ನೀಟ್ ಪಶ್ನೆ ಪತ್ರಿಕೆ ಸೋರಿಕೆ : ತಪ್ಪಿತಸ್ಥರ ವಿರುದ್ಧ ಸಿಬಿಐ ತನಿಖೆ : ನಿರ್ದಿಷ್ಟ ದಿನಾಂಕದಂದು ಮರುಪರೀಕ್ಷೆ : ಸಂಸದ ಕೋಟ…!!

ಉಡುಪಿ : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ದಿಟ್ಟ ನಿರ್ಧಾರವನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.

ಪ್ರಶ್ನೆ ಪತ್ರಿಕೆ ಸೋರಿಕೆಯಾದ ವಿಚಾರ ತಿಳಿಯುತ್ತಿದಂತೆ ಕೇಂದ್ರಸರ್ಕಾರ ಪರೀಕ್ಷೆಯನ್ನು ರದ್ದುಗೊಳಿಸಿದೆ. ಮರು ಪರೀಕ್ಷೆ ಮಾಡುವ ಸಂದರ್ಬದಲ್ಲಿ ಯಾವುದೇ ಹೆಚ್ಚುವರಿ ಸುಂಕವನ್ನು ತೆಗೆದುಕೊಳ್ಳದೇ, ಹೊಸ ಸಮಸ್ಯೆಗಳಿಗೆ ಆಸ್ಪದ ನೀಡದಂತೆ ಕ್ರಮಕೈಗೊಳ್ಳುವ ಭರವಸೆಯನ್ನು ಕೇಂದ್ರಸರ್ಕಾರ ನೀಡಿದೆ.

ಅಲ್ಲದೇ ತಪ್ಪಿತಸ್ಥರ ವಿರುದ್ಧ ಸಿಬಿಐ ತನಿಖೆ ನಡೆಸಿ, ನಿರ್ದಿಷ್ಟ ದಿನಾಂಕದಂದು ಮರುಪರೀಕ್ಷೆ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದರು.