Home Karavali Karnataka ಬಂಟ್ವಾಳ : ಸಜೀಪನಡು ಗ್ರಾಮ ಪಂಚಾಯತ್ ನಿಂದ ಮೂಲಭೂತ ಸೌಕರ್ಯದ ಬಗ್ಗೆ ನಿರ್ಲಕ್ಷ್ಯ ಹಾಗೂ ದುರಾಡಳಿತವನೂ...

ಬಂಟ್ವಾಳ : ಸಜೀಪನಡು ಗ್ರಾಮ ಪಂಚಾಯತ್ ನಿಂದ ಮೂಲಭೂತ ಸೌಕರ್ಯದ ಬಗ್ಗೆ ನಿರ್ಲಕ್ಷ್ಯ ಹಾಗೂ ದುರಾಡಳಿತವನೂ ವಿರೋಧಿಸಿ ಧರಣಿ…!!

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮ ಪಂಚಾಯತ್ ನಿಂದ ಮೂಲಭೂತ ಸೌಕರ್ಯದ ಬಗ್ಗೆ ನಿರ್ಲಕ್ಷ್ಯ ಹಾಗೂ ದುರಾಡಳಿತವನೂ ವಿರೋಧಿಸಿ ಸದಸ್ಯ ನಾಸೀರ್ ಸಜೀಪ ಅವರು ಪಂಚಾಯತ್ ಕಚೇರಿ ಮುಂಭಾಗ ಧರಣಿ ಕುಳಿತರು.

ಪಂಚಾಯತ್ ವ್ಯಾಪ್ತಿಯಲ್ಲಿ ದಾರಿದೀಪ ದುರಸ್ತಿ ಮತ್ತು ಚರಂಡಿಯ ಹೂಳೆತ್ತುವ ಬಗ್ಗೆ ಪಂಚಾಯತ್ ಗೆ ದೂರು ನೀಡಲಾಗಿದ್ದರೂ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ ಈ ಹಿನ್ನಲೆಯಲ್ಲಿ ಜುಲೈ 16. ರೊಳಗೆ ಸಮಸ್ಯೆಗೆ ಪರಿಹಾರ ಸಿಗದೇ ಇದ್ದಲ್ಲಿ ಜುಲೈ 17 ರಂದು ಧರಣಿ ಕೂರುವುದಾಗಿ ಪಂಚಾಯತ್ ಹಾಗೂ ಮೇಲಾಧಿಕಾರಿಗಳಿಗೆ ತಿಳಿಸಿದ್ದೇನೆ ಇದುವರೆಗೂ ಸಮಸ್ಯೆ ಬಗೆಹರಿಸಲು ಮುಂದಾಗದ ಹಿನ್ನೆಲೆಯಲ್ಲಿ ಧರಣಿ ನಡೆಸುತ್ತಿದ್ದೇನೆ ಎಂದು ನಾಸಿರ್ ‌ಸಜಿಪ ತಿಳಿಸಿದ್ದಾರೆ.

ಸಂಜೆ ವೇಳೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ವೇತಾ ಹಾಗೂ ಕಾರ್ಯದರ್ಶಿ ಇಸ್ಮಾಯಿಲ್ ಅವರು ನಾಸಿರ್ ಅವರೊಂದಿಗೆ ಮಾತುಕತೆ ನಡೆಸಿ ಶುಕ್ರವಾರ ದುರಸ್ತಿ ಕಾರ್ಯ ನಡೆಸುವುದಾಗಿ ಭರವಸೆ ನೀಡಿದ್ದು, ತಾತ್ಕಾಲಿಕವಾಗಿ ಧರಣಿ ಕೈ ಬಿಡಲಾಗಿದೆ. ಒಂದು ವೇಳೆ ಆಗದೇ ಇದ್ದಲ್ಲಿ ಮತ್ತೆ ಧರಣಿ ಮುಂದುವರಿಸಿದಾಗಿ ಅವರು ತಿಳಿಸಿದ್ದಾರೆ.