Home Latest 8 ಲಕ್ಷ ರೂಪಾಯಿ ವೆಚ್ಚದ ಕಕ್ಕುಂಜ ಬಳಿಯ ಕಾಲುಸಂಕ ನಿರ್ಮಾಣಕ್ಕೆ ಶಾಸಕರಿಂದ ಗುದ್ದಲಿ ಪೂಜೆ…!!

8 ಲಕ್ಷ ರೂಪಾಯಿ ವೆಚ್ಚದ ಕಕ್ಕುಂಜ ಬಳಿಯ ಕಾಲುಸಂಕ ನಿರ್ಮಾಣಕ್ಕೆ ಶಾಸಕರಿಂದ ಗುದ್ದಲಿ ಪೂಜೆ…!!

ಕಾಪು ವಿಧಾನಸಭಾ ಕ್ಷೇತ್ರದ ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕುಂಜ ಬಳಿ ಕಾಲುಸಂಕ ನಿರ್ಮಾಣಕ್ಕೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ 8 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಇಂದು ದಿನಾಂಕ 09-02-2026 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

 

ಈ ಸಂದರ್ಭದಲ್ಲಿ ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜನಾರ್ಧನ ಆಚಾರ್ಯ, ಸದಸ್ಯರಾದ ಗಣೇಶ್ ಶೆಟ್ಟಿ ಪೈಯಾರು, ಲತಾ ಆಚಾರ್ಯ, ಇವ್ಜಿನ್ ಲೋಬೋ ಶಾಂಭವಿ ಕುಲಾಲ್, ಸ್ಟಾನ್ಲಿ ಕೋಡ್ದಾ, ಮಾಜಿ ಸದಸ್ಯರಾದ ರೇಖಾ ಕುಲಾಲ್, ಸ್ಥಳೀಯರಾದ ರವಿ ಶೆಟ್ಟಿ, ಉದಯ ಕುಲಾಲ್, ಯಾದಲ್ ಕುಲಾಲ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.