Home Crime ಕಾಪು : ವ್ಯಕ್ತಿಯೋರ್ವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ…!!

ಕಾಪು : ವ್ಯಕ್ತಿಯೋರ್ವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ…!!

ಕಾಪು: ಉಡುಪಿ ಜಿಲ್ಲೆಯ ಕಾಪು ಸಮೀಪ ವ್ಯಕ್ತಿಯೋರ್ವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆದರೆ ಮೃತ ಪಟ್ಟಿರುವ ವ್ಯಕ್ತಿಯ ಯಾರೆಂದು ವಿವರ ತಿಳಿದುಬಂದಿರುವುದಿಲ್ಲ.

ಪ್ರಕೆಣದ ವಿವರ: ದಿನಾಂಕ 25/11/2025 ಪಿರ್ಯಾದಿದಾರರಾದ ಸತೀಶ ಜೆ ಹಬ್ಬು ಇವರು ಇನ್ನಂಜೆ ರೈಲ್ವೆ ಸ್ಟೇಷನ್‌ ನಲ್ಲಿ ಸ್ಟೇಷನ್‌ ಮಾಸ್ಟರ್‌ ಆಗಿ ಕೆಲಸದಲ್ಲಿರುವಾಗ 16:30 ಗಂಟೆಗೆ ರೈಲು ಗಾಡಿ ಸಂಖ್ಯೆ 16586 ( ಮುರ್ಡೇಶ್ವರ – ಬೆಂಗಳೂರು ) ರಲ್ಲಿನ ಚಾಲಕರಾದ ಕೆವಿನ್‌ ರವರು ಪಿರ್ಯಾದಿದಾರರಿಗೆ ವಾಕಿಟಾಕಿ ಮೂಲಕ ಕೆರಮಾಡಿ ಕಿ.ಮೀ 700/24 ರಲ್ಲಿ ಓರ್ವ ವ್ಯಕ್ತಿಯು ರೈಲಿಗೆ ಎದುರು ಬಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದು ನಂತರ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಲಾಗಿ ಇನ್ನಂಜೆ ರೈಲ್ವೆ ಸ್ಟೇಷನ್‌ ಉತ್ತರಕ್ಕೆ ಸುಮಾರು 1 ಕಿ.ಮೀ ದೂರಲ್ಲಿ ಓರ್ವ ವ್ಯಕ್ತಿಯ ಮೃತ ದೇಹವು ರೈಲ್ವೆ ಹಳಿಯ ಮೇಲೆ ಛಿದ್ರ ಛಿದ್ರವಾಗಿ ಬಿದ್ದಿರುವುದು ಕಂಡುಬಂದಿರುತ್ತದೆ. ಆದರೆ ಮೃತ ಪಟ್ಟಿರುವ ವ್ಯಕ್ತಿಯ ಯಾರೆಂದು ತಿಳಿದುಬಂದಿರುವುದಿಲ್ಲವಾಗಿದೆ.

ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 40/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.