Home Crime ಇಸ್ಪೀಟು ‌ಆಟ : ಮೂವರು ವಶಕ್ಕೆ…!!

ಇಸ್ಪೀಟು ‌ಆಟ : ಮೂವರು ವಶಕ್ಕೆ…!!

ಕೋಟ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಕೆದೂರು ಗ್ರಾಮದ ಕಲ್ಲು ಕೊರೆ ಶೆಡ್‌ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೋಟ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್. ಅವರು ದಾಳಿ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ಸ್ಥಳೀಯರಾದ ಕೆದೂರು ಗ್ರಾಮದ ಕೃಷ್ಣ (40), ದಿನೇಶ ಪೂಜಾರಿ (35), ಮಣೂರು ಪಡುಕರೆಯ ಹರೀಶ (28) ಎಂದು ತಿಳಿಯಲಾಗಿದೆ.

ಆರೋಪಿಗಳ ಬಳಿ ಇದ್ದ ನಗದು 7,600 ರೂ ಮತ್ತು ಇಸ್ಪೀಟ್ ಜುಗಾರಿಗೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿಸಿದ್ದಾರೆ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.