Home Crime ಕಡಬದ ಯುವಕ ಐರ್ಲೆಂಡ್‌ನಲ್ಲಿ ಸಾವು…!

ಕಡಬದ ಯುವಕ ಐರ್ಲೆಂಡ್‌ನಲ್ಲಿ ಸಾವು…!

ಕಡಬ : ಐರ್ಲೆಂಡ್‌ನಲ್ಲಿ ಕಡಬದ ಕುಟ್ರುಪಾಡಿ ವಿಮಲಗಿರಿ ನಿವಾಸಿಯಾದ ಸಾಂಜೋ ಸುನಿಲ್ ಯುವಕ ನಿಗೂಢವಾಗಿ ಸಾವನ್ನಪ್ಪಿದ್ದ ಘಟನೆ ನಡೆದಿದೆ.

ಡಬ್ಲಿನ್ ನಗರದ ಫಿಂಗ್ಲಾಸ್‌ನ ಚಾರ್ಲ್ಸ್‌ಟೌನ್ ಪ್ರದೇಶದ ಮನೆಯಲ್ಲಿ ಸಾಂಜೋ ಸುನಿಲ್ ಶವವಾಗಿ ಪತ್ತೆಯಾಗಿದ್ದಾರೆ.

ಪತಿಯ ಸಾವಿನ ಸುದ್ದಿ ಕೇಳಿ ಪತ್ನಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ನಿಗೂಢ ಸಾವಿಗೆ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಸಾಂಜೋ ಸುನಿಲ್ ಕುಟುಂಬಕ್ಕೆ ಭಾರೀ ಆಘಾತವನ್ನು ಉಂಟು ಮಾಡಿದೆ.ಸದ್ಯ ಐರಿಶ್ ಪೊಲೀಸರ ತನಿಖೆ ನಡೆಯುತ್ತಿದೆ.