Home Karavali Karnataka ಉಡುಪಿ : ಧಾರ್ಮಿಕ ಸಭೆ…!!

ಉಡುಪಿ : ಧಾರ್ಮಿಕ ಸಭೆ…!!

ಉಡುಪಿ : ಹಿಂದೂ ಸನಾತನ ಧರ್ಮ ಬಹಳ ಶ್ರೇಷ್ಠ ಧರ್ಮ. ಎಲ್ಲಾ ಧರ್ಮಗಳಂತೆ ಒಳ್ಳೆಯದನ್ನೇ ಹೇಳಿದೆ. ನಾವೆಲ್ಲರೂ ಒಳ್ಳೆಯದನ್ನು ಮಾತ್ರ ಪಾಲಿಸಬೇಕು.ಎಲ್ಲಾ ಧರ್ಮಗಳನ್ನು ಪ್ರೀತಿಸಬೇಕು, ಗೌರವಿಸಬೇಕು ಎಂದು ಜೈನ ಮುನಿ ಮೂಡುಬಿದ್ರೆಯ ಚಾರುಕೀರ್ತಿ ಭಟ್ಟಾಚಾರ್ಯ ಅವರು ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ವಿಶ್ವನಾಥ್ ಶೆಣೈ ಅವರು ಉಡುಪಿಯ ತೆಂಕಪೇಟೆಯಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಮಾತನಾಡಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಸೇವೆ ಸಲ್ಲಿಸಿದ ಶ್ರೀನಿವಾಸ ಕಾಮತ್ ಜನಾರ್ಧನ್ ಮತ್ತು ಉಮೇಶ್ ಅವರನ್ನು ಸ್ವಾಮೀಜಿಯವರು ಗೌರವಿಸಿದರು.

ರಾಜ್ಯ ಮತ್ತು ಜಿಲ್ಲಾಪತ್ರಕರ್ತರ ಸಂಘಟನೆಗೆ ಆಯ್ಕೆಯಾದ ಆಸ್ಟ್ರೋಮೋಹನ್, ಜನಾರ್ಧನ ಕೊಡವೂರು, ಮೋಹನ್ ಹಂದಾಡಿ ಅವರನ್ನು ಸ್ವಾಮೀಜಿಯವರು ಗೌರವಿಸಿದರು.ಯಕ್ಷಗಾನ ಕಲಾರಂಗದ ಕಾರ್ಯದರ್ಶಿ, ಮುರಳಿ ಕಡೆಕಾರ್ ನಿರೂಪಿಸಿದರು. ರವಿರಾಜ್ ಹೆಚ್‍.ಪಿ. ಧನ್ಯವಾದ ನೀಡಿದರು