ಉಡುಪಿ : ಶ್ರೀ ಭ್ರಾಮರಿ ನಾಟ್ಯಾಲಯ ಅಮ್ಮುಂಜೆ ಈ ವರ್ಷ ರಜತ ಸಂಭ್ರಮ ದಲ್ಲಿದ್ದು “ರಜತ ವರ್ಷ: ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ” ಧ್ಯೇಯ ದೊಂದಿಗೆ ಯೋಜನೆ ರೂಪಿಸಿಕೊಂಡು ದಿನಾಂಕ: 16/11/2025 ಭಾನುವಾರ ಭವಾನಿ ಮಂಟಪ ಅಂಬಲಪಾಡಿ ಯಲ್ಲಿ ಸಮಯ ಸಂಜೆ 3.00 ಗಂಟೆಗೆ “ಮಾರ್ಗಂ – ಭರತ ನಾಟ್ಯ ಪ್ರಸ್ತುತಿ” ಯೊಂದಿಗೆ ರಜತ ವರ್ಷದ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಸಹೃದಯಿ ಕಲಾಭಿಮಾನಿ ಬಂಧು ಮಿತ್ರರು ಆಗಮಿಸಿ ನಮ್ಮೀ ರಜತ ವರ್ಷದ ಕಾರ್ಯಕ್ರಮಕ್ಕೆ ಶುಭಾಶೀರ್ವಾದ ನೀಡಬೇಕೆಂದು ವಿನಮ್ರವಾಗಿ ಸಂಯೋಜಕರು ವಿನಂತಿಸಿಕೊಂಡಿದ್ದಾರೆ.



